ಪುಟ:ಜಗನ್ಮೋಹಿನಿ .djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\NN ಜಗನ್ನೋಹಿನಿ. ೧೪೩ ರಿತು, ಈ ರೀತಿಯಾಗಿ, ಒಮ್ಮೆನ್ನೊಮ್ಮೆ ಮೇರೆದಪ್ಪಿ ಉಕ್ಕುತ್ತಿದ್ದ ಕೋಪವನ್ನು ಆಕೆಯು ನಿಮಿಷಮಾತ್ರದಲ್ಲಿ ಅಡಗಿಸಿಕೊಂಡು ಚಿತ್ರ ಲೇಖೆಯಮುಖವನ್ನು ನಿಟ್ಟಿಸಿ ನೋಡಿ, 14 ಎಲೇ, ನೀನಂತಹ ಅದೃಷ್ಠ ವಾದಿ ಎಮ್ಬುದು ನನಗೆ ಮುನ್ನೆಯೇ ತಿಳಿದಿದ್ದರೆ, ನಾನು ನಿನ್ನನ್ನು ಬಹುಮರ್ಯಾದೆಯಿಂದ ಕಾಣುತ್ತಿದ್ದೆನು, ನಿನ್ನ ಯೋಗ್ಯತೆಯನ್ನು ತಿಳಿಯದೇ ನಿನ್ನೊಡನೆ ನಾನು ಆತುರಪಟ್ಟು ನನ್ನ ಮನೋಗತವನ್ನು ಒಡೆ .ದು ಹೇಳಿದ್ದಕ್ಕಾಗಿ ನಾನು ಬಹಳ ಪಶ್ಚಾತಾಪಪಡುತ್ತೇನೆ” ಎನ್ದಳು. ಆ ಮಾತಿಗೆ ಚಿತ್ರಲೇಖೆಯು ಅದರಿ, ಬೆದರಿ, ಬೆಣ್ಣಾಗಿ, ತಲೆ ಬಾಗಿ, “ ಮಹಾರಾಣಿಯೇ ಮನ್ನಿಸಬೇಕು ! ಮನ್ನಿಸಬೇಕು !! ವೀರ ಕ್ಷತ್ರಿಯ ಕುಮಾರಿಯಾದ ನಿನ್ನ ವಾರಾವರಣದಲ್ಲಿ ಸರ್ವದಾ ವಾಸ ಮಾಡುತ್ತಿರುವ ಈ ನಿನ್ನ ಪಾದಸೇವಕಳು ಸೋಮಾರಿಗಳನೈ ಎನ್ನಿ ಗೂ ಅದೃಷ್ಟವಾದಿಯಾಗುವುದಿಲ್ಲ: ಆದರೆ, ಬ್ರಹ್ಮ ಘಟನೆಯಲ್ಲಿ ನಮ್ಮುಗೆ ಇಟ್ಟು ಅಭೀಷ್ಟ ಸಿದ್ಧಿಯಾಗುವುದಕ್ಕೆ ಇಷ್ಟ ದೇವತಾ ಪ್ರಾರ್ಥ ನೆಯನ್ನು ಮಾಡಬೇಕಾದುದು ನಮ್ಮ ಕರ್ತವ್ಯವೆಂದು ನಾನು ಅಭಿ ಪ್ರಾಯ ಪಟ್ಟೆನಲ್ಲದೇ ಅವಿಷಯವಾಗಿ ನಾವು ಪ್ರಯತ್ನವೇ ಮಾಡ ಬಾರದೆಂದು ದುರ್ವಾದವನ್ನು ಮಾಡಲಿಲ್ಲ, ಚಿತ್ರಲೇಖೆಯ ಸಮಾಧಾನವು ಹಟಾತ್ತಾಗಿ ಏರಿದ್ದ ವೀಗಕುಮಾ ರಿಯ ಕೋಪವನ್ನು ಜವ್ವನೆ ಇಳಿಸಿತು, ಇದು ಸಹಜವೇಸರಿ ; ಏತ ಕೆಂದರೆ, ಶಾಪಾನುಗ್ರಹಶಕ್ತರಾದ ಋಷಿಗಳ ಕುಲದಲ್ಲಿ ಪ್ರಸೂತರಾದ ವರಿಗೆ ಕೋಪವು ಕ್ಷಣಿಕವಾಗಿರುವುದೇನೂ ಸ್ವಭಾವವಿರುದ್ಧವಲ್ಲ. ಮೋಹಿನೀ :-ಸೌಮ್ಯಳಾಗಿ, ಎಲೇ, ಚಿತ್ರಲೇಖೆ, ನನ್ನ ಮನೋಗತವನ್ನು ನಿನಗೆ ಮತ್ತೊಂದು ತಡವೆ ಒಡೆದು ಹೇಳುವೆನು