ಪುಟ:ಜಗನ್ಮೋಹಿನಿ .djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಜಗನ್ನೋಹಿನಿ. AAAAAAAANAMANIA \\\hhhhhhhhhh/\\ ಚಿತ್ರಲೇಖೆಯು:-ಅವಳನ್ನು ನೋಡಿ, “ಎಲೇ, ಜಾಗ್ರತೆ ಯಾಗಿ ನಮ್ಮ ಮನೆಗೆ ಹೋಗಿ ನನ್ನ ಚಿತ್ರದಸಾಮಾನುಗಳನ್ನೆಲ್ಲಾ ತೆಗೆದುಕೊಂಡುಬಂದು ಅವುಗಳನ್ನೆಲ್ಲಾ ಇಲ್ಲಿ ಚಿತ್ರಕರ್ಮಕ್ಕೆ ಅನುಕೂಲ ವಾಗಿ ಅಣಿಮಾಡು ಎಂದು ಹೇಳಿದಳು | ಅದಕ್ಕೆ ಆ ದಾಸಿಯು, “ಅಪ್ಪಣೆಯಂತಾಗಲಿ' ಎಂದು ಹೊರ ಟು ಹೋಗಲು ಚಿತ್ರಲೇಖೆಯು ಮಹಾರಾಣಿಯನ್ನು ಕುರಿತು, “ಒಡ ತಿಯೇ, ಚಿತ್ರಸಾಮಗ್ರಿಯು ಸಿದ್ಧವಾಗುವುದರೊಳಗಾಗಿ ನಾವು ನಮ್ಮ ಪ್ರಾತಃಸ್ಮಾನಸಂಧ್ಯಾವಂದನಾದಿಗಳನ್ನು ತೀರಿಸಿಕೊಂಡುಬರುವ ಎನ್ನಲು ರಾಣಿಯು, 6“ಓಹೋ! ಸಂಧ್ಯಾಕಾಲವು ಆಗಲೇ ಮಾರಿಹೋದಹಾ ಗಿದೆ ! ನಡೆ ಆ ಕೆಲಸವನ್ನು ಮುಂಚೆ ಮಾಡಿಕೊಂಡು ಬರುವ ”ಎಂದು ಎದ್ದು ಸ್ನಾನಕ್ಕೆ ಹೊರಟಳು. ಚಿತ್ರಲೇಖೆಯ ಅವಳನ್ನು ಹಿಂಬಾ ಲಿಸಿದಳು. ಹನ್ನೆರಡನೆಯ ಪ್ರಕರಣ ವರಾನ್ವೇಷಣ. ಮಧ್ಯಾಹ್ನದ ಒಳಗಾಗಿ ಮಹಾರಾಣಿಯ ಶಯ್ಯಾಗೃಹವು ಚಿತ್ರಲೇಖೆಯ ಚಿತ್ರಶಾಲೆಯಾಗಿ ಪರಿಣಮಿಸಿತು. ಜಗನ್ನೋಹಿನಿಯ ಮಂಚದ ಇದಿರಿಗೆ ವಿಚಿತ್ರತರವಾದ ಚಿತ್ರಕಮ್ಪಳಿಯಿಂದ ಅಲಂಕೃತ ವಾಗಿದ್ದ ದೊಡ್ಡದೊಂಡು ಮೇಜು ಇಡಲ್ಪಟ್ಟಿದ್ದಿತು. ಇದರ ಮೇಲೆ ಚಿತ್ರಕಲೆಗೆ ಸಾಧಕಗಳಾದ ಸಾಮಾಗ್ರಿಗಳೂ ಸಿದ್ಧವಾಗಿದ್ದವು. ಇದರ