ಪುಟ:ಜಗನ್ಮೋಹಿನಿ .djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೪೭ \r\r\r ಮುಮ್ಯಾಗದಲ್ಲಿ ಎರಡು ಕುರ್ಚಿಗಳು ಒಂದರ ಮಗ್ಗುಲಲ್ಲೊ ನ್ನು ಇಡ ಲ್ಪಟ್ಟಿದ್ದುವು. ಅಲ್ಲಿಯ ದಾಸಿಯರೆಲ್ಲರೂ ಅಪ್ರಮತ್ತರಾಗಿ ಮಹಾ ರಾಣಿಯನ್ನು ನಿರೀಕ್ಷಿಸಿಕೊಂಡಿದ್ದರು. ಸುಮಾರು ಒಂದು ಗಂಟೆಯ ಹೊತ್ತಿಗೆ ಮಹಾರಾಣಿಯು ಮತ್ತು ಚಿತ್ರಲೇಖೆಯು ಮಾಧ್ಯಾತ್ಮಿಕವನ್ನು ತೀರಿಸಿಕೊಂಡು ಅಲ್ಲಿಗೆ ಸಡಗರದಿಂದ ಬನ್ನು ಸೇರಿದರು. ಮೋಹಿನಿಯು ಆ ಮೇಜಿನ ಮುನ್ನು ಗಡೆಯಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತುಕೊಂಡು ಹಸನ್ಮುಖಿ ಯಾಗಿ ಚಿತ್ರಲೇಖೆಯ ಮುಖವನ್ನು ನೋಡಿ, 66 ಚಿತ್ರಲೇಖೇ, ಇನ್ನು ತಡವೇಕೆ ? ಜಾಗ್ರತೆಯಾಗಿ ನಿನ್ನ ಆಸನವನ್ನು ಅಲಂಕರಿಸಿ ಪ್ರಕೃತ ಕಾರ್ಯವನ್ನು ಪ್ರಾರಂಭಿಸು ಎನ್ದಳು. ಆಗ ಚಿತ್ರಲೇಖೆಯು, ಅಪ್ಪಣೆಯಂತಾಗಲಿ 'ಎನ್ನು ಮಹಾ ರಾಣಿಯ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡು ಮುನ್ನು ಗಡೆಯ ಮೇಜಿನ ಮೇಲೆ ಸಿದ್ದವಾಗಿದ್ದ ಕಾಗದಗಳಲ್ಲಿ ಒನ್ನು ಕಾಗದ ವನ್ನೂ, ತೂಲಿಕೆಯನ್ನೂ ಕೈಗೆ ತೆಗೆದುಕೊಂಡು ಜಗನ್ನೋಹಿನಿಯ ಮುಖವನ್ನು ನೋಡಿ, 66ಒಡತಿಯೇ, ನಾನು ಮೊಟ್ಟಮೊದಲು, ಕುನ್ನ ೪ಾಧೀಶ್ವರನಾದ ಚಂದ್ರವಂಶದ ಸೋಮಶೇಖರರಾಯನ ಜೇಷ್ಠ ಪುತ್ರ ನಾದ ತಾರಾಧೀಶನ ಪ್ರತಿರೂಪವನ್ನು ಚಿತ್ರಿಸುವೆನು ಎನ್ನು ಚಿತ್ರ ವನ್ನು ಬರಿಯ ತೊಡಗಿದಳು. ಆಗ ಮೋಹಿನಿಯು ಅತಿಕೌಕುತದಿಂದ ಬರಿಯುವುದನ್ನು ನೋಡುವುದಕ್ಕೆ ಸಲುವಾಗಿ ತನ್ನ ಕುರ್ಚಿಯನ್ನು ಚಿತ್ರಲೇಖೆಯ ಕುರ್ಚಿಯ ಹತ್ತಿರಕ್ಕೆ ಸೆಳೆದುಕೊಂಡು ಕೂಡಲು, ಚಿತ್ರ ಲೇಖೆಯು ಅವಳನ್ನು ಕುರಿತು, 66ಒಡತಿಯೇ, ಬರೆಯಲ್ಪಡುತ್ತಿರುವ ಚಿತ್ರವು ಪೂರ್ತಿಯಾಗುವುದಕ್ಕೆ ಮುಂಚೆ ಅಷ್ಟು ದರ್ಶನೀಯವಾಗಿರುವು