ಪುಟ:ಜಗನ್ಮೋಹಿನಿ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಜಗನ್ನೋಹಿನಿ YYYYYY ದಿಲ್ಲ ; ಪೂರ್ತಿಯಾದಮೇಲೂ ಅದು ಬರೆಯಲ್ಪಡುತ್ತಿರುವಾಗ ನೋಡು ತಿದ್ದವರ ಕಣ್ಣಿಗೆ ಅಷ್ಟು ಸದ್ರೂಪವಾಗಿಯೂ ಕಾಣುವುದಿಲ್ಲ, ಆದುದ ರಿಂದ ನೀನು ಹೇಗಾದರೂ ನಿನ್ನ ಮನಸ್ಸನ್ನು ಬಿಗಿಹಿಡಿದು ಇದನ್ನು ಪೂರ್ತಿಯಾಗುವವರೆಗೂ ನೋಡದೇ ಇರುವುದು ಒಳ್ಳೆಯದು ಳು. - ಅದಕ್ಕೆ ಮೋಹಿನಿಯು, 66 ಹಾಗೆಯೇಆಗಲಿ' ಎಂದು ತನ್ನ ಕುರ್ಚಿ ಯನ್ನು ಕೊಂಚ ಹಿಂದಕ್ಕೆ ಜರುಗಿಸಿಕೊಂಡು ಕೂಡಲು ಚಿತ್ರಲೇಖೆಯು ಆಕೆಯ ವ್ಯತ್ಯಸ್ತವಾದ ಕಂಠಸ್ವರವನ್ನು ಕೇಳಿ ತಲೆಯೆತ್ತಿ ಆಕೆಯ ಮುಖವನ್ನು ನೋಡಿದಳು, ಮುಖವು ಕೊಂಚ ವಿವರ್ಣವಾಗಿದ್ದಿತು. ಅದನ್ನು ಕಂಡು ಆ ಚದುರೆ ಯು ತಾನು ಅವಶಳಾಗಿ ಆಡಿದಮಾತಿಗೆ ಮನದಲ್ಲಿ ಪಶ್ಚಾತ್ತಾಪಗೊಂಡು, ಒಡತಿಯೇ, 66ನಾನು ಈ ಚಿತ್ರವನ್ನು ಮುಗಿಸುವವರೆಗೆ ನಿನಗೆ ವಿನೋದಾರ್ಥವಾಗಿ ಈ ರಾಜಕುಮಾರನ ಭರಿ ತ್ರೆಯನ್ನು ಸಂಕ್ಷೇಪವಾಗಿ ಹೇಳುವೆನು ಕೇಳು. ” ಎಂದು, ವಿವಿಧವಾದ ವರ್ಣಸಮ್ಮೇಳನವನ್ನು ಮಾಡಿಕೊಂಡು ಚಿತ್ರಿಸುತ್ತಾ, ಈಗಿನಕಾಲದ ರಾಜಕುಮಾರರಲ್ಲೆಲ್ಲಾ ಈತನು ಅತಿಸುಂದರನೆಂದು ಯುವತಿಜನರಲ್ಲಿ ಪ್ರಖ್ಯಾತಿಯನ್ನು ಪಡೆದಿರುವನು. ಆದುದರಿಂದಲೇ, ನಾನು ಮೊಟ್ಟ ಮೊದಲು ಈತನಪ್ರತಿಕೃತಿಯನ್ನು ಚಿತ್ರಿಸಲು ಕೈಕೊಂಡೆನು. ಈತನ ಚಿತ್ರ ಪರವಿಲ್ಲದ ರಾಜಕುಮಾರಿಯರ ಅತಃಪುರವೇಇಲ್ಲ, ಈಗಿನ ಕಾಲ ದಲ್ಲಿ ಈತನ ಭಾವಚಿತ್ರಕ್ಕೆ ಇರುವಬೆಲೆಯು ಮತ್ತಾವುದಕ್ಕೂ ಇಲ್ಲ, ನಮ್ಮ ಸೋದರಮಾವನ ಮಗಳಾದ ಪ್ರೇಮಲತೆಯು ಈತನ ಪ್ರತಿಕೃತಿ ಯನ್ನು ಚಿತ್ರಿಸಿದ್ದಳು ; ಅದನ್ನು ನಮ್ಮ ಸಾರ್ವಭೌಮನ ಮಗಳಾದ ಸೌದಾಮಿನಿಯು, ಕಳೆದ ತಿಂಗಳಲ್ಲಿ ಅಯೋಧ್ಯೆಯಲ್ಲಿ ನಡೆದ ಚಿತ್ರಕಲೆ