ಪುಟ:ಜಗನ್ಮೋಹಿನಿ .djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೪೯ ಕೌಶಲ್ಯ ಪ್ರದರ್ಶನದಲ್ಲಿ ಒಂದು ಲಕ್ಷ ವರಾಹಕ್ಕೆ ಕೊಂಡುಕೊಂಡಳು, ಈತನಿಗೆ ಮದನಮೋಹನನೆಂಬ ಮತ್ತೊಂದು ಹೆಸರುಂಟು. ಈ ಹೆಸರು ಈತನಿಗೆ ಅನ್ವರ್ಥಕವಾಗಿರುವುದರಿಂದ ಈತನ ಬನ್ನು ಮಿತ್ರರೆಲ್ಲರೂ ಈತ ನನ್ನು 'ಮದನಮೋಹನ' ಎನ್ನಲೇಕರೆಯುವರು. ಈತನಿಗೆ ಈ ಹೆಸರು ಬನ್ನು ದೊಂದು ಪರಮಾಶ್ಚರ್ಯಕರವಾದ ಇತಿಹಾಸವಾಗಿದೆ. ” ಎನ್ನು ಕುರ್ಚಿಯಿಂದ ವರ್ಣಸಮ್ಮೇಳನವನ್ನು ಮಾಡುತ್ತಾ ಸುಮ್ಮನಾದಳು. ಆಗ ಮೋಹಿನಿಯು, ಅತಿಕೌತುಕದಿಂದ, ಚಿತ್ರಲೇಖೇ, ಆ ಇತಿಹಾಸವೇನು ? ಜಾಗ್ರತೆಯಾಗಿಹೇಳು. ” ಎನ್ನು ಅವಳು ಬರಿಯು ತಿದ್ದ ಚಿತ್ರವನ್ನು ನೋಡುವುದಕ್ಕೆ ಮುಂದಕ್ಕೆ ಬಗ್ಗಿ ದಳು. ಆಗಚಿತ್ರಲೇಖೆಯು ಆಚಿತ್ರವನ್ನು ಮರೆಮಾಡಿ ಹಿಡಿದುಕೊಂಡು ಮುಗುಳುನಗೆಯಿಂದ, 66ಒಡತಿಯೇ, ಕೊಂಚತಡೆ ಇನ್ನೊಂದು ನಿಮಿಷದ ಲ್ಲಿ ಇದನ್ನು ಮುಗಿಸುವೆನು, ಅಸಮಾಪ್ತವಾದ ಚಿತ್ರವನ್ನು ನೋಡ ಬಾರದೆಂದು ನಾನಾಗಲೇ ಬಿನ್ನವಿಸಲಿಲ್ಲವೆ "ಎದ್ದಳು, ಅದಕ್ಕೆ ಜಗನ್ನೋ ಹಿನಿಯು ಲಜ್ಞಾಛಾಯೆ ಯಿಂದ ಮನೋಹರವಾದ ಮಂದಹಾಸದಿಂದ, “ಅಹುದಹುದು ! ನಾನದನ್ನು ಆಗಲೇ ಮರೆತುJದೆನು, ಒಳ್ಳೆಯದು ಆ ಇತಿಹಾಸವನ್ನಾ ದರೂ ಜಾಗ್ರತೆಯಾಗಿಹೇಳು ಎನ್ಗಳು, ಚಿತ್ರಲೇಖೆ:-ಈ ಮದನಮೋಹನನು ಒಂದಾನೊನ್ನು ದಿನ ಹಿಮವತ್ಪಾ ಕಾಗ್ತಾರಕ್ಕೆ ಬೇಟೆಯಾಡುವುದಕ್ಕೆ ಹೋದನು, ಆಗ ಮೃಗನನ್ನು ಅಟ್ಟಿ ಕೊಂಡು ತಾನೊಬ್ಬನೇ ತನ್ನ ಹಿಂಬಾಲಕರನ್ನೆಲ್ಲಾ ಹಿಂದೆಬಿಟ್ಟು ಆ ಮಹಾರಣ್ಯದೊಳಕ್ಕೆ ಬಹುದೂರ ಹೊರಟು ಹೋದನು. ಅಲ್ಲಿಂದ ಹಿಂದಿರುಗಿ ಬರುವಾಗ ತೊಳಲಿ, ಬಳಲಿ, ಬಾಯಾರಿ, ಜಲಾರ್ಥಿ ಯಾಗಿ, ಅಲ್ಲಿ ಕೇಳಬರುತ್ತಿದ್ದ ಹಂಸಕಾರಂಡವಾದಿ ಜಲಚರಪಕ್ಷಿಗಳ