ಪುಟ:ಜಗನ್ಮೋಹಿನಿ .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಜಗನ್ನೂ ಹಿನಿ. MMMAAAAAAAAAAAAAA ANNhhh ದಲ್ಲಿಯೇ ಅಣಗಿಸಿಕೊಂಡು, "ಕಾಲವು ನಿರವಧಿಯಾಗಿದ್ದರೆ, ಕುಮ್ಹಾ ರನೂ ಚಿತ್ರವನ್ನು ಬರೆಯಲಾಪನು, ಇಷ್ಟು ಅಲಸಳಾದ ನಿನಗೆ ಚಿತ್ರ ಕಲಾನಿಧಿ' ಎಂತಲೂ, ೯ ಚಿತ್ರಕಲಾಪಾರೀಣ 'ಳೆಂತಲೂ ದೊಡ್ಡ ದೊಡ್ಡ ಪೊಳ್ಳು ಬಿರುದುಗಳನ್ನು ಕಣ್ಣು ಮುಚ್ಚಿಕೊಂಡು ಯಾರು ಕೊಟ್ಟರೋ ಕಾಣೆ ” ಎನ್ನಳು. ಚಿತ್ರಲೇಖೆ:-ನನಗೆ ಬಿರದುಕೊಟ್ಟ ಸಭೆಯಲ್ಲಿ ನೀನುತಾನೆ ಅಗ್ರಾಸನವನ್ನು ಅಲಂಕರಿಸಿದ್ದುದು. “ ನಾನು ತಾಮೂಲವನ್ನು ಹಾಕಿ ಕೊಳ್ಳುವಷ್ಟರೊಳಗಾಗಿ ನನ್ನನ್ನು ತಾಮೂಲವನ್ನು ಹಾಕಿಕೊಳ್ಳು ತಿರುವಂತೆ ಯಾರು ಚಿತ್ರಿಸುತ್ತಾರೆಯೋ ಅವರಿಗೆ ನನ್ನ ಕಂಠದಲ್ಲಿರುವ ರತ್ನ ಹಾರವನ್ನು ಕೊಡುತ್ತೇನೆ. ”ಎನ್ನು ಹೇಳಿದಾಗ ಆ ಮೂಲ್ಯವಾದ ರತ್ನ ಹಾರಕ್ಕೆ ಯಾರು ಅರ್ಹರಾದರು ? ಮೋಹಿನಿ:-ಎಲ್‌, ನೀನು ಚಿತ್ರಕಲೆಗಿಂತಲೂ ಮರಳುಮಾತಿ ನಲ್ಲಿ ಅತಿಪ್ರವೀಣಳಾಗಿ ಕಾಣುತ್ತಿರುವೆ. - ಚಿತ್ರಲೇಖೆ:- ಇದೋ ನಿನ್ನ ಚಿತ್ರವು ಮುಗಿಯಿತು ? ” ಎನ್ನು ತನ್ನ ಕೈಲಿದ್ದ ತೂಲಿಕೆಯನ್ನು ಮೇಜಿನಮೇಲಿರಿಸಿ ಎರಡು ಕೈಗಳಿಂದಲೂ ಆ ಚಿತ್ರವನ್ನು ಹಿಡಿದುಕೊಂಡು ಕುತ್ತಿಗೆಯನ್ನು ಎತ್ತಿ ತಿರುಗಿಸಿ ತಿರು ಗಿಸಿ ನೋಡಲಾರಂಭಿಸಿದಳು. ಮೋಹಿನಿ:-ಸಿಟ್ಟುಗೊಂಡು, “ಎಲೇ, ಚಿತ್ರಲೇಖೇ, ನೀನು ನೋಡುವುದಕ್ಕಾಗಿಯೇ ಚಿತ್ರವನ್ನು ಬರೆದುಕೊಂಡಹಾಗಿದೆ. ಒಳ್ಳೆ ಯದು, ಸಾವಕಾಶವಾಗಿ ನೋಡು, ನೋಡು. ” - ಚಿತ್ರಲೇಖೆ: “ ಒಡತಿಯೇ ಕೋಪಿಸಿಕೊಳ್ಳಬೇಡ. ಇದೋ ನೋಡು ; ಈ ಸುಕುಮಾರನೇ ಮದನಮೋಹನನೆಂಬ ರಾಜಕುಮಾರನು” ಎಂದು ತಾನು ಬರದ ಚಿತ್ರವನ್ನು ರಿಸಿದಳು.