ಪುಟ:ಜಗನ್ಮೋಹಿನಿ .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ, ೧೫ ೩ vJvv

  • \r\r\r\ N # V V\+1 # # /

21/\ / \/ / ?\\ '\rv//\n\vvvt ಮೋಹಿನಿ:-ಆ ಪಠವನ್ನು ಒಂದುನಿಮಿಷ ನಿಟ್ಟಿಸಿನೋಡಿ, ಎಲ್‌, ಚಿತ್ರಲೇಖೇ, ಮಧುಪಾನಮತ್ತರಾಗಿ ಸ್ವಲ್ಟಾವಿಹಾರವನ್ನು ಮಾಡುತ್ತಿದ್ದ ಆ ಸುರಕಾಮಿನಿಯರ ಕಣ್ಣಿಗೆ ಈತನು ಮನ್ಮಥನಂತೆ ಕಾಣಿಸಿದಮಾತ್ರಕ್ಕೆ ಲೋಕದಲ್ಲಿರುವ ಮಾನಿನಿಯರೆಲ್ಲರೂ ಈತನನ್ನು ಭುವನಮೋಹನನೆಂದು ಆರಾಧಿಸುವುದು ಶುದ್ಧ ಅಸಂಗತವಾಗಿದೆ. ಮಾನವಸ್ವಭಾವನ್ನು ಅರಿತವರಾರಾದರೂ ಈತನನ್ನು ಒಂದುಕ್ಷಣನೋಡಿ ದರೆ, ಈತನಮುಖದಮೇಲೆ ಸ್ಪುಟಾಕ್ಷರದಿಂದ ಬರೆದಂತೆ ಕಾಣುತ್ತಿರುವ ಈತನ ಅವಗುಣಗಳೆಲ್ಲವೂ ಅವರಿಗೆ ಗೋಚರವಾಗದೇ ಇರುವುದಿಲ್ಲ. ಇದೋನೋಡು--ಈತನ ಕಡೆಗಣ್ಣಗಳಲ್ಲಿ ಕಾಡಿಗೆಸವರಿದಂತೆ ಕಾಣು ತಿರುವ ಕಪ್ಪುಛಾಯೆಯು ಕೇವಲ ಕಾಮುಕಭಾವವನ್ನು ಸೂಚಿಸು ತದೆ; ಶುಕನಾಸಿಕೆಯು ಸ್ವಾರ್ಥ ಪರತೆಯನ್ನೂ, ಸ್ವಾಭಿಮಾನವನ್ನೂ ಸೂಚಿಸುತ್ತಿದೆ ; ಸಂಕುಚಿತವಾದ ಭೂಲತೆಗಳು ತಾಪಕರವಾದ ಕೋಪಸ್ವಭಾವನ್ನು ಸೂಚಿಸುತ್ತದೆ ; ಒತ್ತಾದ ತುಟಿಗಳು ಅನರ್ಗತ ವಾದ ಕಾಪಟ್ಯವನ್ನು ಸೂಚಿಸುತ್ತಿದೆ ; ವಿಶೇಷೋಕ್ತಿಯಿಂದೇನು ? ನೀನುಮೊದಲಾಡಿದಂತೆ ಈಸೌಂದರ್ಯವು ನಿರ್ಗನ್ಯಕುಸುಮದಂತೆ ನಿರರ್ಥಕವಾಗಿ ಕಾಣುತ್ತಿದೆ. ಇಂತಹ ಅಲ್ಪಮಾನವನು ನನ್ನ ಗ್ರಹ ರಾಜಋಷಿಕುಮಾರಿಯ ಮನವನ್ನು ಅಪಹರಿಸಲಾಪನೆ ? ಸಾಕು ! ಸಾಕು ! ! ಮತ್ತೊಬ್ಬನನ್ನು ಬರೆ ನೋಡುವ.” ಎನ್ನು ಆ ಚಿತ್ರಪಠ ವನ್ನು ಕೆಳಕ್ಕೆ ಬೀಸಾಡಿದಳು. ಆಗಚಿತ್ರಲೇಖೆಯು ಮೇಜಿನ ಮೇಲಿದ್ದ ಮತ್ತೊಂದು ಕಾಗದ ವನ್ನು ತೆಗೆದುಕೊಂಡು, 66 ಒಡತಿಯೇ, ನಾನೀಗ ಹೇಮನಗರದ ಮಹಾ ರಾಜನಾದ ಚಿತ್ರಸೇನನ ಹಿರಿಯಮಗನಾದ ಸಂಗ್ರಾಮಸಿಂಹನೆಂಬ ರಾಜ 80