ಪುಟ:ಜಗನ್ಮೋಹಿನಿ .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಜಗನ್ನೋಹಿನಿ, ಮನೆಗೆ ಕೊಂಡು ಬನ್ನು ತನ್ನ ಹೆಂಡತಿಯಕೈಗೆ ಕೊಟ್ಟನು, ಆಕೆಯು ಅದಕ್ಕೆ ತನ್ನ ಔರಸಪುತ್ರನಿಗೆ ಹೇಗೋ ಹಾಗೆ ಜಾತಕರ್ಮ ನಾಮಕರ ಣಾದಿ ಸಂಸ್ಕಾರಗಳನ್ನು ಮಾಡಿಸಿದಳು, ಪುರೋಹಿತರು ಆ ಮಗುವಿಗೆ ದೇವದತ್ತನೆಂದು ಹೆಸರಿಟ್ಟರು ; ತಂದೆಯು ಅದನ್ನು ರಾಜಶೇಖರನೆಂದು ಕರೆದನು, ತಾಯಿಯು ಸೋಮಸುಂದರನೆಂದು ಕರೆದಳು; ಈ ಮಗು ದಿನೇದಿನೇ ಶುಕ್ಲ ಪಕ್ಷದ ಚಂದ್ರನಂತೆ ಬೆಳದು ಬಾಲ್ಯ ಕೌಮಾರಾವಸ್ಥೆ ಗಳನ್ನು ದಾಟಿತು, ಈಗ ಈತನ ಯೌವನ ದಶೆಯ ಚರಿತ್ರೆಯು ಬಹಳ ಮನೋರಂಜಕವಾಗಿದೆ. ಎನ್ನುತ್ತಿರುವಾಗ ಜಗನ್ನೋಹಿನಿಯು ಬೇಸರದಿಂದ, « ಚಿತ್ರಲೇಖೆ, ಈ ಅಜ್ಞಾತ ಕುಲಗೋತ್ರನ ಚರಿತ್ರೆಗೆ ಇನ್ನು ಮಂಗಳವನ್ನು ಮಾತು. ತಾಪಸಕು.ನಾರಿಯರ ಮನವು ಇಂತಹ ಕಾಕರಿಮನುಜರಲ್ಲಿ ನಾಟುವುದಿಲ್ಲ, ಅದರ ಎದೆಯಮೇಲೆ ಬರೆದಿದ್ದ ಅಭಿನವ ಭರತನೆಂಬ ಸಮಾಸದ ಉತ್ತರಹದಕ್ಕೆ ಆ ಸುಪ್ರಸಿದ್ಧ ನಾದ ದಶರಥ ಕುಮಾರನೆಂಬ ಅರ್ಥವೋ ಅಥವಾ ನಟನೆಮ್ಮ ಅರ್ಥವೋ ಅಥವಾ, ದುಷ್ಟ ವ್ಯಕುಮಾರನೆಂದು ಅರ್ಥವೋ ಅಥವಾ ನಾಟ್ಯಾಚಾರ್ಯನೆಂದು ಅರ್ಥವೋ ಅಥವಾ ನಟನೆಂದು ಅರ್ಥ ವೋ ಹೇಳುವುದಕ್ಕೆ ಸಾಕಾದ ಕಾರಣಗಳಿಲ್ಲ. ಬಹುಶಃ, ಸೋಮದತ್ತನು ಆ ಪದಕ್ಕೆ ದುಷ್ಯಂತ ಕುಮಾರನೆಂದು ಅರ್ಥ ಮಾಡಿಕೊಂಡು ತಾನು ಭವಿಷ್ಯಚಕ್ರವರ್ತಿಯ ತಂದೆ ಎಂಬ ಅಭಿಮಾನದಿಂದಿರಬಹುದು, ಆದರೆ ಯುವಕನ ಪೂರ್ವ ವೃತ್ತಾಂತವನ್ನು ಪರ್ಯಾಲೋಚಿಸಿದರೆ ಆ ಪದಕ್ಕೆ ಸಾಮಾನ್ಯನಾದ ನಟನೆಂಬುದಕ್ಕಿಂತಲೂ ಬೇರೆ ಯಾವ ಅರ್ಥವೂ ಸಾ ಧುವಾಗಿ ಕಾಣುವುದಿಲ್ಲ.” ಎಂದು ಚಿತ್ರಲೇಖೆಯು ಚಿತ್ರಿಸುತ್ತಿದ್ದ ಆ ಚಿತ್ರ ಪಠವನ್ನು ಕಿತ್ತು ಕೊಂಡು ಚೂರುಚೂರಾಗಿ ಹರದು ಬೀಸಾಡಿ