ಪುಟ:ಜಗನ್ಮೋಹಿನಿ .djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AAAAAAAAMA ላለለለለለለለለለለ፡ ೧೬೦ ಜಗನ್ನೋಹಿನಿ ಪರಿಣಮಿಸಿತು. ವೀರಕೇಸರಿಯು ಏನೋ ಒಂದು ಮಾತಿಗಾಗಿ ಚನ್ನೈ ಪ್ರಭೆಯ ಮೇಲೆ ಕೋಪಿಸಿಕೊಂಡು ನಾನು ನಿನ್ನನ್ನು ಸರ್ವಥಾ ವಿವಾಹಮಾಡಿಕೊಳ್ಳುವುದಿಲ್ಲ ಎಂದು ಶಪಥಮಾಡಿದನು. ಅದಕ್ಕೆ ಆ ವೀರಕುಮಾರಿಯು ಕೋಪಾವಿಷ್ಟಳಾಗಿ, “ಎಲೈ, ನೀನು ನನ್ನನ್ನು ವಿವಾಹಮಾಡಿಕೊಂಡರೂ ಸರಿಯೇ; ಮಾಡಿಕೊಳ್ಳದಿದ್ದರೂ ಸರಿಯೇ. ನಾನೇನೊ ನಿನ್ನನ್ನು ಮನಸಾ ವರಿಸಿದ್ದೆನು; ಆದುದರಿಂದ, ನಾನು ನಿನ್ನ ಹೊರತು ಮತ್ತೊಬ್ಬನ ಕೈಯನ್ನು ಹಿಡಿಯುವುದೂ ಇಲ್ಲ; ನನ್ನ ಸಂಕಲ್ಪವು ಸಿದ್ದಿಯಾಗುವುದಕ್ಕೆ ತಕ್ಕ ಪ್ರಯತ್ನವನ್ನು ನನ್ನ ಮರಣಾ ವಧಿಮಾಡದೇ ವಇರುವುದೂ ಇಲ್ಲ, ಒಳ್ಳೆಯದಿರಲಿ ! ವೀರಪತ್ನಿಯರ ರಕ್ತವು ನನ್ನ ಧಮನಿಯಲ್ಲಿ ಓಡಾಡುತ್ತಿದ್ದರೆ, ನಾನು ನಿನ್ನಿಂದಲೇ ಒಬ್ಬ ಮಗನನ್ನು ಪಡೆದು ಅವನಿಂದಲೇ ವೀರಕೇಸರಿಯಾದ ನಿನ್ನನ್ನು ಕೈಶೆರೆಹಿಡಿಸಿ ಕೇಸರಿಯಂತೆ ಪಂಜರದಲ್ಲಿಡಿಸಿ ನಿನಗೆ ವಿವೇಕೋದಯವಾ ಗುವ ಹಾಗೆ ಮಾಡದೇ ಇರುವುದಿಲ್ಲ, ಈ ನನ್ನ ಶಪಥವು ನಿನಗೆ ಚೆನ್ನಾಗಿ ಜ್ಞಾಪಕವಿರಲಿ ಎನ್ನು ಮಿತಿಮೀರಿದ ದುಃಖದಿಂದ ಉಕ್ಕಿ ಕಪೋಲಗಳಮೇಲೆ ಕಾಲುವೆಯಾಗಿ ಹರಿಯುತ್ತಿದ್ದ ಕಣ್ಣೀರನ್ನು ಶರಗಿ ನಿಂದ ಒರೆಸಿಕೊಳ್ಳುತ್ತಾ ತನ್ನ ಮನೆಗೆ ಹೊರಟುಹೋದಳು.” ಎನ್ನು ಮಾತು ನಿಲ್ಲಿಸಿ ಏಕಾಗ್ರ ಚಿತ್ತತೆಯಿಂದ ಆ ಚಿತ್ರದ ಸೂಕ್ಷ್ಮ ಭಾಗಗ ಳನ್ನು ಚಿತ್ರಿಸತೊಡಗಿದಳು. ಅದಕ್ಕೆ ಜಗನ್ನೊ ಹಿನಿಯು ಅಚ್ಚರಿಗೊಂಡು, “ಅಹಹಾ ! ಇದೀಗ ವೀರಕ್ಷತ್ರಿಯ ಕುಮಾರಿಗೆ ತಕ್ಕ ಶಪಥವು ! ಪ್ರತಿಜ್ಞೆಯು ನೆರವೇರಲಿ ; ನೆರವೇರದೇ ಹೋಗಲಿ ; ನೆರವೇರುವುದಕ್ಕೆ ತಕ್ಕ ಪ್ರಯ ತ್ನವನ್ನು ಮರಣಾವಧಿ ಮಾಡುವುದೀಗ ಪೌರುಷವು, ಅವಿಚ್ಛಿನ್ನವಾದ