ಪುಟ:ಜಗನ್ಮೋಹಿನಿ .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ, ೧೬೧ ಪ್ರಯತ್ನ ವೇ ಅಭೀಷ್ಟಸಿದ್ಧಿ ಆದಿಕಾರಣ, ಇಂತಹ ಅಸಾಧ್ಯವಾದ ಶಪಥವನ್ನು ಮಾಡಿದ ಆ ಮನಸ್ವಿಯು ಅದಕ್ಕೆ ತಕ್ಕ ಪ್ರಯತ್ನ ವನ್ನು ಮಾಡದೇ ಬಿಡುವಳೇ ! ಒಳ್ಳೆಯದು, ಮುಂದೆ ಮುಂದೆ ?” ಎನ್ಗಳು. ಆಗ ಚಿತ್ರಲೇಖೆಯು, ೧ ಬಳಿಕ ಆ ವಿದ್ಯುಲ್ಲತೆಯು ಕನ್ಯಾ ಜನೋಚಿ ?” ತವಾದ ವ್ರತೋಪಾಸ ನಿಯಮಗಳನ್ನು ಆಚರಿಸಬೇಕೆಂಬ ನೆವದಿಂದ ತನ್ನ ಮಾತಾಪಿತೃಗಳ ಅನುಜ್ಞೆಯನ್ನು ಪಡೆದು ತಮ್ಮ ಕುಲಪುರೋಹಿ ತರಾದ ದತ್ತಾತ್ರೇಯರ ಆಶ್ರಮಕ್ಕೆ ಹೋಗಿ ಅಲ್ಲಿ ಮುನಿಜನ ಶಿಶೂಷೆ ಯನ್ನು ಮಾಡುತ್ತಾ ತನ್ನ ಮನೋರಥ ಸಿದ್ದಿಯಾಗುವ ಸಮಯ ವನ್ನು ತಾಳಿಮೆಯಿಂದ ನಿರೀಕ್ಷಿಸಿಕೊಂಡಿದ್ದಳು. ಕೆಲಕಾಲದಮೇಲೆ, ವಿಚಿತ್ರ ವೀರ್ಯನು ಮೃಗಯಾವಿಹಾರಾರ್ಥವಾಗಿ ಆ ದತ್ತಾತ್ರೇಯರ ಆಶ್ರ ಮಕ್ಕೆ ಬಂದನು, ಆಗ ದೈವಯೋಗದಿಂದಲೋ ಅಥವಾ ವಿದ್ಯುಕ್ತ ತೆಯ ಪ್ರಯತ್ನದಿಂದಲೋಆತನ ದೃಷ್ಟಿಯು ವಿದ್ಯುಲ್ಲತೆಯಮೇಲೆ ಬಿದ್ದಿತು. ಅರಗಳಿಗೆಯಲ್ಲಿ ಆತನ ಮನವು ಆ ಸೌಂದರ್ಯನಿಧಿಯಾದ ವಿದ್ಯುಲ್ಲತೆಯ ಕಟಾಕ್ಷಶರವೃಷ್ಟಿಯಿಂದ ಜಯಿಸಲ್ಪಟ್ಟಿತು. ಬಳಿಕ ಆತನು ಆ ವನಿತೆಯನ್ನು ವರಿಸಬೇಕೆಂದು ಎಷ್ಟು ಸಾಹಸಪಟ್ಟರೂ ಆ ಕೆಯು ಅದಕ್ಕೆ ಅನುಮೋದಿಸಲಿಲ್ಲ. ಆಗ ಆ ವಿಚಿತ್ರವೀರ್ಯನುಏನೆಂದು ಹೇಳಲಿ-ಮಾನವನ್ನು ಬಿಟ್ಟು ಆ ಕಾಮಿನಿಯ ಕಾಲಿಗೆ ಬಿದ್ದು ದೈನ್ಯವೃತ್ತಿಯಿಂದ ಬೇಡಿಕೊಂಡನು.” ಆಗ ಆ ಚದುರೆಯು ಆತನಿಂದ ನನ್ನನ್ನೇ ಪಟ್ಟದ ರಾಣಿಯನ್ನಾಗಿಮಾಡಿಕೊಳ್ಳುವೆನು, ಎನ್ನು ಸೂರ್ಯ ಚನ್ನಸಾಕ್ಷಿತವಾಗಿ ಪ್ರಮಾಣವಚನವನ್ನೂ, ಅದಕ್ಕೆ ನಿದರ್ಶನವಾಗಿ ಆತನ ಮುದ್ರೆಯುಂಗುರವನ್ನೂ ತೆಗೆದುಕೊಂಡು ಆತನನ್ನು ವರಿಸಿದಳು. ಆ ರಾಜನು ತನ್ನ ಪಟ್ಟಣಕ್ಕೆ ಹಿಂದಿರುಗಿದಮೇಲೆ ಸ್ವಾಭಾವಿಕವಾಗಿ 21