ಪುಟ:ಜಗನ್ಮೋಹಿನಿ .djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಜಗನ್ಮೋಹಿನಿ ಬಿದ್ದು ಹೋದಳು. ಆಕೆಯು ನೆಲಕ್ಕೆ ಬಿದ್ದು ಹೋದುದಕ್ಕೆ ಕಾರಣವನ್ನು ಬಹಳ ಹೊತ್ತು ಯೋಚಿಸಬೇಕಾದುದಿಲ್ಲ.ಅಕೆಯ ಮನವು ಆಕೆಯ ಕನ್ದನ ಹಿಂದೆಯೇ ಹೊರಟುಹೋಯಿತು. ಮನವು ತನುವನ್ನು ಬಿಟ್ಟು ಹೋದಮೇಲೆ ಇನ್ದ್ರಿಯಗಳು ಸ್ಥಬ್ದವಾದವು ; ಮನೋ ಇ ನ್ದ್ರಿಯ ವ್ಯಾಪಾರಶೂನ್ಯವಾದ ತನುವು ತಾನಾಗಿಯೇ ನೆಲಕ್ಕೆ ಬಿದ್ದು ಹೋದುದೇನೂ ಸ್ವಭಾವವಿರುದ್ಧವಲ್ಲ. ಮೋಹನೀ:_ಅಷ್ಟಲ್ಲದೇ ಸ್ತ್ರೀಬುದ್ದಿಯು ವಿನಾಶಕವಾದು ದೆಂದು ಸುಪ್ರಸಿದ್ಧವಾಯಿತೆ ? ಒಳ್ಳೆಯದು ! ಆಮೇಲೇನಾಯಿತು ? ಚಿತ್ರಲೇಖೆ:_ಮಹಾರಾಣಿಯೇ, ಮನ್ನಿಸಬೇಕು ; ಈ ಅಪವಾ ದವು ಅಸತೀವಿಷಯಕವಾದುದು. ಸತಿಯರ ಮತಿಯು ಅತಿಹಿತವಾ ದುದು.ಅದಕ್ಕೆ ಈ ಪತಿವ್ರತಾ ಶಿರೋಮಣಿಯ ಚರಿತ್ರೆಯೇ ನಿದರ್ಶ ನವಾಗಿದೆ. ಈ ಸಾಧ್ವಿಯ ಶಪಥವು ಹೀಗೆ ನೆರವೇರುವುದೋ ಕೊಂಚ ಕೇಳು.ಆ ಬಾಲಕನು ಕ್ಷಿಪ್ರದಲ್ಲಿಯೇ ಬೇಕಾದಷ್ಟು ಸೈನ್ಯವನ್ನು ಕಟ್ಟಿ ಕೊಂಡು ಬಂದು ತನ್ನ ತನ್ದೆಯನ್ನು ಪ್ರತಿಭಟಿಸಿ ಹನ್ನೆರಡು ದಿನ ಅವನೊಂದಿಗೆ ಹೆಣಗಾಡಿ ಕಡೆಗೆ ಅವನನ್ನು ಸೋಲಿಸಿ ಸೆರೆಹಿಡಿದು ಷಂ ಜರದಲ್ಲಿ ಹಾಕಿಕೊಂಡು ತಮ್ಮ ತಾಯಿಯ ಇದಿರಿಗೆ ತಂದು ನಿಲ್ಲಿಸಿ ದನು. ಮೋಹಿನೀ :_ಆಹಾ ! ಕಡೆಗೆ ಹೆಂಗಸಿನ ಹಟವೇ ಗೆದ್ದಿಶಲ್ಲಾ! ಆಮೇಲೆ ಏನಾಯಿತು ? ಚಿತ್ರಲೇಖೆ:_ ಚಿಂತಾನಳಕ್ಕೆ ಗ್ರಾಸವಾಗಿ, ವ್ರತೋಪಾಸನಿಯ ಮಗಳಿಂದ ಕೃಶಳಾಗಿ ಆಸ್ತಿಪಂಜರದಂತೆ ಕಾಣುತ್ತಿದ್ದ ಆ ಸಾಧ್ವಿಯು ತನ್ನ ವಲ್ಲಭನನ್ನು ನೋಡಿದ ಕೂಡಲೇ ಆತನನ್ನು ಸೆರೆಬಿಡಿಸಿ ಆತನಿಗೆ ಸಾ