ಪುಟ:ಜಗನ್ಮೋಹಿನಿ .djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೬೫ \\r\ # \r\ # *#*#*/* \ \r\/ MMA/VV/V ಷ್ಟಾಂಗಪ್ರಣಾಮವನ್ನು ಮಾಡಿ, ತನ್ನ ಪೂರ್ವೋತ್ತರವನ್ನು ಆತನಿಗೆ ಅರಿಕೆಮಾಡಿ, ಆತನು ರಹಸ್ಯದಲ್ಲಿ ತನ್ನೊಡನೆ ಆಡಿದ್ದ ಮಾತುಗಳನ್ನು ನೆನಪು ಮಾಡಿ, ಆತನು ತನಗೆ ಕೊಟ್ಟಿದ್ದ ಮುದ್ರೆಯುಂಗುರ ಮುಂತಾದ ಕುರುವುಗಳನ್ನು ಆತನ ಪ್ರತಿಬಿಮ್ಬದಂತೆ ಕಾಣುತ್ತಿದ್ದ ಆ ಬಾಲವೀರ ನನ್ನು ತೋರಿ, ಈಗಲಾದರೂ ನನ್ನ ಅಪರಾಧಗಳನ್ನು ಮನ್ನಿಸಿ ನನ್ನ ನ್ನು ನಿನ್ನ ಪಾದಸೇವಕಳನ್ನಾಗಿ ಸ್ವೀಕರಿಸಬೇಕು' ಎನ್ನು ಬಹುವಾಗಿ ಬೇಡಿಕೊಂಡಳು. ಆದಾಗ್ಯೂ ಆ ಮಹಾರಾಜನು ಆ ಪತಿವ್ರತಾ ಶಿರೋ ಮಣಿಯನ್ನು ಕಣ್ಣೆತ್ತಿ ಕೂಡಾ ನೋಡದೇ, ನನಗೆ ಸಲವಾಗಿ ಮಹಾ ಮಹಾ ವೀರರಾದ ನನ್ನ ಸೈನಿಕರೆಲ್ಲರೂ ರಣರಂಗದಲ್ಲಿ ತಮ್ಮ ಪ್ರಾಣಗ ಳನ್ನು ಒಪ್ಪಿಸಿದರು. ನನ್ನ ಪ್ರಾಣಗಳಿಗಿಂತಲು ಹೆಚ್ಚಾದ ಮಾನವು ಅಳಿದುಹೋಯಿತು ; ಇನ್ನುಳಿದ ಈ ಕಾಷ್ಟದಿಂದ ಪ್ರಯೋಜನವೇನು ? ಈ ಅಪ್ರಯೋಜಕವಾದ ಕಾಷ್ಟ ವನ್ನು ನೀನು ದಯಮಾಡಿ ವೀರಾಗ್ರಣಿ ಯಾದ ನಿನ್ನ ಮಗನ ಕೈಯಿಂದ ಕಡಿಯಿಸಿ ಪಾವಕನಿಗೆ ಒಪ್ಪಿಸಿದರೆ ನಿನಗೆ ಕೋಟಿಯಜ್ಞಗಳ ಫಲವು ಲಭಿಸುತ್ತದೆ” ಎನ್ದನು. ಆಗ ಆಸಮಯ ದಲ್ಲಿ (ಎಲೈ, ಮಹಾರಾಜನೇ, ನೀವುಗಳು ಅ ದಿನ ಪಾಕಶಾಲೆಯ ಸಡ ಸಾಲೆಯಲ್ಲಿ, ಪಂಚಭೂತಸಾಕ್ಷಿಯಾಗಿ ಪರಸ್ಪರ ವಿವಾಹ ಮಾಡಿಕೊಳ್ಳು ತೇವೆಂದು ವಾಗ್ದಾನ ಮಾಡಿದಾಗಲೇ ನಿಮ್ಮ ಗಳ ಮುಖ್ಯವಾದ ವೈವಾ ಹಿಕವಿಧಿಯು ನೆರವೇರಿತು; ಆ ನಿನ್ನ ವಾಗ್ದಾನಕ್ಕೆ ಎರೋಧವಾಗಿ ನಡೆ ದುದರಿಂದಲೇ ನಿನಗೆ ಇಹದಲ್ಲಿ ಇಷ್ಟು ಕಷ್ಟನಷ್ಟಗಳು ಸಂಭವಿಸಿದುವು. ಇನ್ನು ಮೇಲಾದರೂ ನೀನು ನಿನ್ನ ಮನಸ್ಸಾಕ್ಷಿಗೆ ಅನುಸಾರವಾಗಿ ನಡದು ಕೊಳ್ಳದೇ ಹೋದರೆ ನಿನಗೆ ಪರಲೋಕದಲ್ಲಿ ಇದಕ್ಕಿಂತಲೂ ಅಧಿಕವಾದ ಆನರ್ಥಗಳು ತಪ್ಪುವುದಿಲ್ಲ. ಈ ಸಾಧ್ಯೆಯೇ ನಿನ್ನ ಪಟ್ಟದರಾಣಿಯು ;