ಪುಟ:ಜಗನ್ಮೋಹಿನಿ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಜಗನ್ನೋಹಿನಿ, \r\\r\r\\\\\n\r\n\r\nrt /\nf hhhhhhht ಈ ವೀರಕುಮಾರನೇ ನಿನ್ನ ಔರಸಪುತ್ರನು, ನೀನಿನ್ನು ನಿನ್ನ ಮನ ಸ್ಸಿನ ಕಾಲುಷ್ಯವನ್ನು ಕಳೆದು ಇವರುಗಳನ್ನು ಯಥಾವಿಧಿಯಾಗಿ ಸ್ವೀಕ ರಿಸು, ಇದರಿಂದ ನಿನಗೆ ಇಹಪರದಲ್ಲಿ ಮಹಾ ಶ್ರೇಯಸ್ಸು ಉಂಟಾಗು ತದೆ' ಎನ್ನು ಅಶರೀರವಾಣಿಯು ಕೇಳಬಂದಿತು. ಅದನ್ನು ಕೇಳಿದ ಕೂಡಲೇ ವಿಚಿತ್ರವೀರ್ಯನು ವಿದ್ಯುಲ್ಲತೆಯ ಕಾಲಿಗೆ ಬಿದ್ದು ಕ್ಷಮಾಪಣೆಯನ್ನು ಬೇಡಿಕೊಂಡು ನೀರಕೇಸರಿಯಾದ ತನ್ನ ಮಗನನ್ನು ಬಾಚಿ ತಬ್ಬಿಕೊಂಡು, ಪಶ್ಚಾತ್ತಾಪದಿಂದಲೂ ಆನನ್ದ ದಿಂದಲೂ ದಡಗುಟ್ಟಿ ಸುರಿಯುತ್ತಿದ್ದ ಆನಂದಭಾಷ್ಪದಿಂದ ಅಭಿಷೇಕ ವನ್ನು ಮಾಡಿದನು, ಅಂದಿನಿಂದ ಈತನನ್ನು ಎಲ್ಲರೂ ವೀರಕೇಸು ಯೆಂದು ಕರೆಯುತ್ತಿರುವರು. - ಜಗನ್ನಿಹಿನೀ:-ಆತನಿಗೆ ವೀರಕೇಸರಿ ಎನ್ನ ಹೆಸರು ಬಹಳ ಅನ್ವರ್ಥಕವಾಗಿದೆ. ಈ ವೀರನ ಭಾವಚಿತ್ರವು ಮುಗಿದಿದ್ದರೆ ಬೇಗ ತಾ ನೋಡುವ ಚಿತ್ರಲೇಖೆಯು ಕೈಲಿದ್ದ ಚಿತ್ರಕ್ಕೆ ತಟತಟನೆ ಒಪ್ಪವಿಟ್ಟು ಎತ್ತಿ ಮೋಹಿನಿಯ ಕೈಗೆ ಕೊಟ್ಟಳು, ಮೋಹಿನಿಯು ಅದನ್ನು ಒಂದು ನಿಮಿಷ ನೋಡಿ ತಲೆದೂಗಿ ಈತನೀಗ ಮಾದರಿಯ ರಾಜಪುತ್ರನು ಪ್ರಪಂಚದಲ್ಲಿ ಸುಖದುಃಖಗಳು ಮಿಶ್ರವಾಗಿರುವಂತೆ ಗುಣದೋಷಗಳೂ ಮಿಶ್ರವಾಗಿಯೇ ಇರುವುವು. ಕೇವಲ ಗುಣಗಣ್ಯವಾದ ವಸ್ತುವಾಗಲಿ ಕೇವಲ ದೋಷದುಷ್ಟವಾದ ವಸ್ತುವೇ ಆಗಲಿ ಬ್ರಹ್ಮ ಸೃಷ್ಟಿಯಲ್ಲಿ ಇಲ್ಲವೇ ಇಲ್ಲ ; ಇದು ಸ್ವಭಾವದ ನಿಯಮ, ಆದರೆ, ಗುಣದೋಷಗಳ ಮಿಶ್ರ ಣದಲ್ಲಿ ಹೆಚೂ ಕಡಮೆ ಇರುತ್ತದೆ. ಗುಣವು ಹೆಚ್ಚಾಗಿದ್ದವರು ಗುಣಿ ಗಳೆಂತಲೂ, ದೋಷಗಳು ಹೆಚ್ಚಾಗಿದ್ದವರು ದೋಷಿಗಳೆಂತಲೂ ಕರೆಯ