ಪುಟ:ಜಗನ್ಮೋಹಿನಿ .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ, ೧೬೬ ಲ್ಪಡುತ್ತಾರೆ. ಈತನ ಮುಖಭಾವದಿಂದ ಈತನು ಗುಣಿಗಳಲ್ಲಿ ಅಗ್ರಗ ಣ್ಯನಾಗಿ ಕಾಣುತ್ತಾನೆ ; ಆದರೆ ಈತನ ಮುಖದಮೇಲೆ ತಾಯಿತಂದೆಗಳ ಹಟಪ್ರಕೃತಿಯು ಬಹು ಸ್ಪಷ್ಟವಾಗಿ ಕಾಣುತ್ತಿದೆ. ಏನಾದರೇನು ? ಇತನು ಸರ್ವಥಾ ನನ್ನ ಮನೋಪಹಾರಿಯಲ್ಲ.” ಎಂದು ಆ ಚಿತ್ರ ವನ್ನು ಚಿತ್ರಲೇಖೆಯ ಕೈಗೆ ಕೊಟ್ಟಳು. ಚಿತ್ರಲೇಖೆಯು ಅದನ್ನು ಮೇಜಿನಮೇಲೊತ್ತಟ್ಟಿಗಿರಿಸಿ, ಮೋಹಿ ನಿಯ ಮುಖವನ್ನು ನೋಡಿ, 14 ಒಡತಿಯೇ, ನಾನೀರಾಜಪುತ್ರರ ಚರಿತ್ರೆ ಯನ್ನು ಆಭಿಜಾತ್ಯ ತಾರತಮ್ಯ ಕ್ರಮದಿಂದ ಚಿತ್ರಿಸುತ್ತಿರುವೆನು, ಈಗ ನಾನು ಬರೆದು ತೋರಿಸಿದ ರಾಜಪುತ್ರರಲ್ಲಿ ಒಬ್ಬರೂ ನಿನ್ನ ವಲ್ಲಭರಲ್ಲದ ಮೇಲೆ ಇನ್ನುಳಿದವರಲ್ಲಿ ಯಾರೂ ನಿನ್ನ ಪ್ರೇಮಕ್ಕೆ ಪಾತ್ರರಾಗುವಷ್ಟು ಯೋಗ್ಯತೆಯುಳ್ಳವರಾಗಿ ಕಾಣುವುದಿಲ್ಲ. ಮತ್ತಾರನ್ನ ಬರೆಯಲಿ ? ಎನ್ನು ಕೊಂಚ ಯೋಚಿಸಿ, ಆಹಾ ! ಮರತು ಹೋಗಿದ್ದೆನು ! ಮತ್ತೊ ಬೃ ರಾಜಕುಮಾರನನ್ನು ನಿನಗೆ ನಾನು ಮೊದಲೇ ಬರದು ತೋರಿಸಬೇ ಕಾಗಿದ್ದಿತು. ಒಳ್ಳೆಯದೀಗ ಆ ರಾಜಪುತ್ರನನ್ನು ಬರೆದು ತೋರಿಸು ವೆನು ನೋಡು.” ಎನ್ನು ಮೇಜಿನಮೇಲಿದ್ದ ಮತ್ತೊನ್ನು ಕಾಗದವನ್ನು ತೆಗೆದುಗೊಂಡು ಕರ್ಚಿಕೆಯಿಂದ ವರ್ಣಸಮ್ಮೇಳನವನ್ನು ಮಾಡುತ್ತಾ, « ಒಡತಿಯೇ, ಈ ಯೌವನಸ್ಥನು ರಾಜನಾದ ಧರ್ಮವರ್ಮನ ಮಗನು, ಏಕಪತ್ನಿವ್ರತನಾದ ಧರ್ಮವರ್ಮನಿಗೆ ಬಹುಕಾಲ ಸಂತಾ ನವೇ ಇಲ್ಲದಿರಲು ಆಗ ಆತನು ಪುತ್ರಕಾಮೇಷ್ಟಿ ಯನ್ನು ಮಾಡಿ ಈ ಸುಪು ತ್ರನನ್ನು ಪಡೆದನು. ಧರ್ಮವರ್ಮನು ನಳಹರಿಶ್ಚನ್ದಾದಿಗಳಂತೆ ಸತ್ಯಸಂಧನಾಗಿದ್ದನು. ದೇವೇನ್ನೊಂದುದಿನ, ಈತನ ಸತ್ಯಸಂಧತೆ ಯನ್ನು ಪರೀಕ್ಷಿಸುವುದಕ್ಕಾಗಿ ಅಷ್ಟದಿಕ್ಷಾಲಕರೊಡನೆ ಸನ್ಯಾಸಿಯ ವೇಷ