ಪುಟ:ಜಗನ್ಮೋಹಿನಿ .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭d ಜಗನ್ನೋಹಿನಿ. vvvvvvv \\ • ಕುರಿತು, 'ಅಪ್ಪಾಜೀ, ನೀನದೇಕೆ ಈಶ್ರೇಯಸ್ಕರವಾದ ಸಮಯದಲ್ಲಿ ಚಿಂ ತಾಕ್ರಾಂತನಾಗಿರುವನೆ ಕಾಣುತ್ತಿರುವೆ ? “ಜಾತಸ್ಯ ಹಿಮ್ಮುವೋಮ್ಮ ತ್ಯುರ್ದೃವಂಜನ್ಮ ಮೃತಸ್ಯ ಚ | ತಸ್ಮಾದಪರಿಹಾರರ್ಥೆನತ್ವಂಶೋಚಿ ತುಮರ್ಹಸಿ | ದೇಹೀನಿತ್ಯಮವಧೈಯಂ ದೇಹೇ ನಿತ್ಯಸ್ಯ ಭಾರತ | ತಸ್ಮಾತೃರ್ವಾಣಿಭೂತಾನಿ ನತ್ವಂಶೋಚಿತುಮರ್ಹಸಿ ||” ಎನ್ನ ಭಗವ ದ್ವಾಕ್ಯವು ನಿನಗೆ ಜ್ಞಾಪಕಕ್ಕೆ ಬರಲಿಲ್ಲವೆ ? ಎಷ್ಟು ದಿನವಿದ್ದರೂ ಸಾ ಯಲೇಬೇಕು, ಸತ್ತ ಮೇಲೆ, ಅಶುಚಿಯಾಗಿಯ, ಅಸ್ಪರ್ಶವಾಗಿಯೂ, ಅಮಂಗಳವಾಗಿಯೂ ಸುಡುಗಾಡಿನ ಪಾಲಾಗಿಹೋಗುವ ಈ ದೇಹವು ಈ ಯತಿವರ್ಯರ ಭೋಜನಕ್ಕೆ ಪಾತ್ರವಾಗುವುದು, ನಾನು ಹಿಗ್ಗೆ ಅನೇಕ ಕೋಟಿ ಜನ್ಮಗಳಲ್ಲಿ ಮಾಡಿದ ಪುಣ್ಯಗಳ ಫಲವಲ್ಲವೆ. ಒಬ್ಬ ಯತಿಗೆ ಭೋಜನವನ್ನು ಮಾಡಿಸಿದರೆ ಮರುಲೋಕಕ್ಕೂ ಸಂತರ್ಪಣೆಮಾಡಿಸಿ ದಂತಾಗುವುದೆಂದು ಶಾಸ್ತ್ರವುಹೇಳುತ್ತದೆ. ಹೀಗಿರುವಾಗ ಅಭ್ಯಾಗತ ರಾದ ಈ ನವ ಯತಿವರ್ಯರಿಗೆ ಏಕಕಾಲದಲ್ಲಿ ತೃಪ್ತಿಪಡಿಸುವುದರ ಫಲ ವನ್ನು ಹೇಳುವುದಕ್ಕೆ ಅಸದಳವಾಗಿದೆ, ಆದುದರಿಂದ ನೀನು ಈ ಸಮ ಯದಲ್ಲಿ ನನ್ನ ಈ ಜನ್ಮವನ್ನು ಸಾರ್ಥಕಮಾಡಿಕೊಳ್ಳುವುದಕ್ಕೆ ಅನುಮೋ ದಿಸಿ, ನಿನ್ನ ಮಾತನ್ನು ಉಳಸಿಕೊಂಡು ನಮ್ಮ ವಂಶದ ಮರ್ಯಾದೆ ಯನ್ನು ಕಾಪಾಡು. ನೀನು ಈ ಅಲ್ಪವಿಷಯಕ್ಕಾಗಿ ಅಜ್ಞರನೆ ವ್ಯಸ ನಪಡುವುದು ಯುಕ್ತವಲ್ಲ ” ಎನ್ನು ತನ್ನ ಕೈಯ್ಯಲ್ಲಿದ್ದ ಕರವಾಳದಿಂದ ತನ್ನ ತಲೆಯನ್ನು ತಾನೇ ಕತ್ತರಿಸಿ ಆ ಯತಿಗಳ ಪಾದಗಳಿಗೊಪ್ಪಿಸಿದನು. ಆಗ ಆ ಸನ್ಯಾಸಿಗಳಾಗಿದ್ದ ಇನ್ನಾದಿದೇವತೆಗಳು ಪ್ರತ್ಯಕ್ಷರಾಗಿ ಆ ಬಾಲಕನ ರುಂಡಮುಂಡಗಳನ್ನು ಸನ್ಧಾನಮಾಡಿ ಅವನಿಗೆ ಮಾನುಷ ಸಾಮಾನ್ಯರಿಗೆ ಅಲಭ್ಯವಾದ ಅನೇಕ ವರಗಳನ್ನು ದಯಪಾಲಿಸಿ, ಮಹಾ