ಪುಟ:ಜಗನ್ಮೋಹಿನಿ .djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ಜಗನ್ನೋಹಿನಿ. Why fYY\f141f/ \ ೩ವು ಸತ್ವಗುಣಪ್ರಧಾನವಾಗಿದ್ದಿತು, ಈಗ ಈತನ ಮುಖದಲ್ಲಿ ರಜೋ ಗುಣಬಾಹುಳ್ಯವು ಕಾಣಬರುತ್ತಿದೆ. ಇದಕ್ಕೆ ಕಾರಣವೇನಿರಬಹು ದೊ ಕಾಣೆನು. ಚಿತ್ರಲೇಖೆ--ನೀನು ಈತನನ್ನು ನೋಡಿದಾಗ ಈತನು ಯಾವ ಸ್ಥಿತಿಯಲ್ಲಿದ್ದನು ? ಮೋಹಿನೀ-ಈತನು ಮಣಿಮಯಮಂಚದಮೇಲೆ ಮಲಗಿ ಸುಖನಿದ್ರೆ ಮಾಡುತ್ತಿದ್ದನು. ಚಿತ್ರಲೇಖೆ-ಹಾಗಾದರೆ, ಸರಿಯೇ, ಅದು ಹೇಗೆನ್ನು ನಿಯೋ ? ಈಗ ನಾನು ಈತನನ್ನು ತನ್ನ ಸೇನಾನಾಯಕರ ಸಂಘದಲ್ಲಿ ದಂಡಯಾ ತ್ರಯ ವಿಷಯವಾಗಿ ಸಂಭಾಷಣೆಯನ್ನು ಮಾಡುತ್ತಿರುವಂತೆ ಚಿತ್ರಿಸಿರು ವೆನು. ಈ ಸಮಯದಲ್ಲಿ ಈತನ ಮುಖದಮೇಲೆ ಅಂತರ್ಗತವಾಗಿದ್ದ ರಜೋಗಣವು ಪ್ರಾಧಾನ್ಯವನ್ನು ಹೊಂದಿ ಪ್ರಕಾಶಿಸುವುದು ಸಹಜವಾ ಗಿದೆ. ಮುಖವು ಮನೋಗತಕ್ಕೆ ಅನುಕ್ರಮಣಿಕೆ. ನಿದ್ರಾವಸ್ಥೆಯಲ್ಲಿ ಸ್ವಾಭಾವಿಕವಾಗಿ ಮನವು ಲೌಕಿಕ ವ್ಯಾಪಾರಶೂನ್ಯವಾಗಿರುವುದರಿಂದ ಆ ಸಮಯದಲ್ಲಿ ಮುಖವು ಕೇವಲ ನೈಜವಾದ ಪ್ರಧಾನಗುಣವನ್ನೇ ಸೂಚಿಸುತ್ತದೆ. ಮೋಹಿನೀ-ಕೊಂಚ ಯೋಚಿಸಿ, “ಎಲ್‌, ಚಿತ್ರಲೇಖೇ, ನೀನು ದಯಮಾಡಿ ಈತನನ್ನು ಮಣಿಮಯ ಮಂಚದಮೇಲೆ ಮಲಗಿ ನಿದ್ರೆ ಮಾಡುತ್ತಿರುವಂತೆ ಚಿತ್ರಿಸು, ನೋಡುವ ” ಚಿತ್ರಲೇಖೆ-.'ಆಹಾ ! ಅದೀಗ ಸಂಶಯನಿವರ್ತಕವಾದ ಕೆಲಸ.” ಎನ್ನು ತವಕದಿಂದ ಮತ್ತೊನ್ನು ಕಾಗದವನ್ನು ತೆಗೆದು ಕೊಂಡು, ಜಗನ್ನೋಹಿನಿಯು ತನ್ನ ಕೈಯಲ್ಲಿದ್ದ ತನ್ನ ವಲ್ಲಭನ ಚಿತ್ರ