ಪುಟ:ಜಗನ್ಮೋಹಿನಿ .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೭೩ ಪಠವನ್ನು ಕಣ್ಣಾರನೋಡುವಷ್ಟರೊಳಗಾಗಿ, ಆಕೆಯ ಅಭೀಷ್ಟದಂತೆ ಚಿತ್ರವನ್ನು ಬರದು ಆಕೆಯ ಕೈಗೆ ಕೊಟ್ಟಳು. ಮೋಹಿನೀ-ತದ್ರೂಪವಾಗಿದ್ದ ಆ ಚಿತ್ರವನ್ನು ಕಣ್ಣಾರನೋಡಿ ಮೋಹಗೊಂಡು ಕೊಂಚಹೊತ್ತು ಮೈ ಮರತವಳಂತೆ ಇದ್ದು ಬಳಿಕ ಮನಸ್ಸನ್ನು ಸ್ವಾಧೀನಕ್ಕೆ ತನ್ನು ಕೊಂಡು ಚಿತ್ರಲೇಖೆಯನ್ನು ನೋಡಿ, “ಎಲ್‌ ಚಿತ್ರಲೇಖೇ, ನಿನ್ನ ಚಿತ್ರಕಲಾಕೌಶಲ್ಯವು ಅಸದೃಶವಾದುದು ; ಈ ಚಿತ್ರ ಪಠವನ್ನು ನೋಡಿದಕೂಡಲೇ ನಾನಾತನನ್ನು ಪ್ರತ್ಯಕ್ಷವಾಗಿ ನೋಡುತ್ತಿರುವೆನೆಂಬ ಭ್ರಾನ್ತಿಯು ದುರ್ನಿವಾರವಾಗಿದೆ. ಈತನೇ ನನ್ನ ಮನೋಮೋಹಕನು ; ಈತನೇ ನನ್ನ ಮನೋವಲ್ಲಭನು ; ಈತ ನೇ ನನ್ನ ಪ್ರಾಣಕಾನ್ಯನು, ಈತನ ಅಡಿದಾವರೆಗಳ ಕೈಂಕರ್ಯವೇ ನನ್ನ ಇಹಪರ ಸುಖಗಳಿಗೆ ಸಾಧಕವಾದುದು, ಇತನಾರವಗನು ? ಈತನ ಹೆಸರೇನು ? ಚಿತ್ರಲೇಖೆ-ತನ್ನೊಳಗೆ ತಾನು, “ರಾತ್ರಿಯಲ್ಲಾ ರಾಮಾ ಯಣಕೇಳಿ ಬೆಳಿಗ್ಗೆ ಶೀತೆಯು ರಾಮನಿಗೇನಾಗಬೇಕು ? ಎನ್ದ ಹಾಗಾ ಯಿತು. ಕಾಮುಕರಿಗೆ ವಿಸ್ಮರಣೆಯು ಸ್ವಾಭಾವಿಕವಾದುದೆಂಬುದಕ್ಕೆ ಇದುವೇ ನಿದರ್ಶನ..' ಎನ್ನು ಕೊಂಡು ನಸುನಗುತ, “ಈತನು ಧರ್ಮ ವರ್ಮನ ಮಗನಾದ ರವಿವರ್ಮನೆಂದು ಮೊದಲೇ ಅರಿಕೆಮಾಡಲಿ ಲವೆ ??? ಮೋಹಿನೀ-ಓಹೋ ! ಅಹುದಹುದು.” ಎನ್ನು ಕೊಂಚ ಯೋಚಿಸಿ, ಎಲ್‌, ಚಿತ್ರಲೇಖೇ, ನಿನ್ನೆ ಸಾಯಂಕಾಲ ಪೂಜ್ಯರಾದ ಕುಶನಾಭರು ಇಲ್ಲಿಗೆ ಬನ್ನು ನನಗೊಂದು ಮಾತು ಹೇಳಿದರು, ಅದೀಗ ನನಗೆ ನೆನಪಿಗೆ ಬಣ್ಣ ತು. ಅದೇನನ್ನು ನಿಯೋ, ನಮ್ಮ ತನ್ನೆಯು ಈ ರಾಜಪುತ್ರನಿಗೆ ನನ್ನನ್ನು ಕೊಟ್ಟು ವಿವಾಹ ಮಾಡಿಸಬೇಕೆಂದು ಕುಶನಾಭ