ವಿಷಯಕ್ಕೆ ಹೋಗು

ಪುಟ:ಜಗನ್ಮೋಹಿನಿ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ney ಜಗನ್ನೋಹಿನಿ. ೧v vvvvvn //vvvvvvvvvvv/s/ '\n\r\fft\r\r\\hhh Whify\\h/YWNW ರಿಗೆ ಹೇಳಿದ್ದನಂತ ; ಅವರು ಅದರಂತೆ ಕಾರ್ಯನಿರ್ವಾಹ ಮಾಡುವುದ ಕ್ರೋಸ್ಕರ ಈ ರಾಜಕುಮಾರನನ್ನು ತಮ್ಮ ಆಶ್ರಮಕ್ಕೆ ಬರಮಾಡಿ ಕೊಂಡು ನಿನ್ನೆ ಸಾಯಂಕಾಲ ಇಲ್ಲಿಗೆ ಬಂದು ಆ ವಿಷಯವಾಗಿ ನನ್ನ ಅಭಿಪ್ರಾಯವನ್ನು ಕೇಳಿದರು. ನಾನದಕ್ಕೆ ಸಮ್ಮತಿಸದಿರಲು ಅವರು ಹಿಂದಿರುಗಿ ತಮ್ಮ ಆಶ್ರಮಕ್ಕೆ ಹೊರಟುಹೋದರು. ಚಿತ್ರಲೇಖೆ-ಅಚ್ಚರಿಗೊಂಡು, 16ಆ ಮಹಾನುಭಾವರು ನಿನ್ನೆ ಸಾಯಂಕಾಲ ಎಷ್ಟು ಹೊತ್ತಿನಲ್ಲಿ ಬಂದಿದ್ದರು ??? ಮೋಹಿನೀ-ಅವರು ಇಲ್ಲಿಂದ ಹೊರಟುಹೋದಾಗ ಸಾಯಂ ಸಾಕಾಲವು ಸವಿಾಪವಾಗುತ್ತಿದ್ದಿತು. ಚಿತ್ರಲೇಖೆ-ಈಗಲೀಗ ನಿನ್ನ ಸ್ವಾರ್ಥವು ನಿರ್ಣಯವ ಯಿತು. ಮಹಾತ್ಮರ ಮನೋಗತವಾದದ್ದು ನಿನ್ನ ದೃಷ್ಟಿಗೋಚರವಾ ದುದೇನೋ ಅತಿಶಯವಲ್ಲ. ಮೋಹಿನೀ-ಮನೋಗತವಾದುದೂ, ದೃಷ್ಟಿಗೋಚರವಾದು ದೂ, ನನ್ನ ಹಸ್ತಗತವಾಗುವ ಬಗೆ ಹೇಗೆ ? ಚಿತ್ರಲೇಖೆ-ಅದೀಗ ಬಹಳ ಸುಲಭಸಾಧ್ಯವಾಗಿದೆ. ಮೋಹಿನೀ-ಅದು ಹೇಗೆ ? ಚಿತ್ರಲೇಖೆ-ನಿನ್ನ ವಲ್ಲಭನಾದ ಆ ರಾಜಕುಮಾರನು ಇನ್ನೂ ಕುಶನಾಭರ ಆಶ್ರಮವನ್ನು ಬಿಟ್ಟು ಹೋಗಿರಲಾರನು ; ಆದುದರಿಂದ ನಾವು ಜಾಗ್ರತೆಯಾಗಿ ಅಲ್ಲಿಗೆ ಹೋದರೆ ನಮ್ಮ ಇಷ್ಟಾರ್ಥ ಸಿದ್ಧಿಯಾಗುವುದ ರಲ್ಲಿ ಏನೂ ಸಂದೇಹವಿಲ್ಲ. ಮೋಹಿನೀ-“ಹಾಗಾದರೆ, ನಾವು ಜಾಗ್ರತೆಯಾಗಿ ನಮ್ಮ ಪ್ರ ಯಾಣಕ್ಕೆ ಬೇಕಾದುವುಗಳನ್ನು ಅಣಿಮಾಡಿಸಿಕೊಂಡು ಸಂಧ್ಯಾಕಾಲಕ್ಕೆ