ಪುಟ:ಜಗನ್ಮೋಹಿನಿ .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಜಗನ್ನೋಹಿನಿ.

  • \# * 1 1 #
  1. 1 # \ \ \ \ \ \ \ \ 1 # + \\ # \ # \ # \ \ # \ \ \

ಲವ್ಯಾಯಮಾನವಾದ ಗುಂಗುರ ಕೂದಲು ಸಮುದ್ರದ ಗಾಳಿಗೆ ಚದರಿ ವಿಕಾಸೊನ್ಮುಖವಾದ ಕೆಂದಾವರೆಯ ಸುತ್ತಲೂ ಸುಳಿದಾಡುವ ದುಷ್ಟಿ ಗಳನ್ನೆ ಕಂಗೊಳಿಸುತ್ತಿದ್ದಿತು ; ಈಕೆಯ ಮೈಯ್ಯ ಮೇಲೆ ಸಾಮಾನ್ಯ ವಾಗಿ ಸುಮಂಗಲಿಯರಿಗೆ ಯೋಗ್ಯವಾದ ಆಭರಣವಾವುದೂ ಇರಲಿಲ್ಲ ; ಈಕೆಯ ಪಕ್ಕದಲ್ಲಿ ಕುಳಿತುಕೊಂಡಿದ್ದ ಹೆಂಗಸಿಗೆ ಸುಮಾರು ಮೂವ್ವ ತ್ತು ವರ್ಷಕ್ಕೆ ಮೇಲಾಗಿದ್ದ ಕಾಣುತ್ತಿದ್ದಿತು. ಈಕೆಯು ಅಮ್ಮ ಲ್ಯವಾದ ಪೀತಾಂಬರವನ್ನು ಉಟ್ಟಿದ್ದಳು ; ಸಕಲಾಭರಣಗಳನ್ನೂ ಇಟ್ಟು ಕೊಂಡಿದ್ದಳು. ಆ ದೋಣಿಯನ್ನು ಇವಳೇ ತನ್ನ ಜತೆಗಾತಿಯ ಸಂಗಡ ಮನ್ದಹಾಸದಿಂದ ಏನೋ ಮಾತನಾಡುತ್ತಾ ನಡಿಸುತ್ತಿದ್ದಳು. ನೋಡುತ್ತಿದ್ದ ಹಾಗೆಯೇ ಆ ದೋಣಿಯು ದಡಕ್ಕೆ ಒಬ್ಬ ಸೇರಿ ತು, ಇಬ್ಬರೂ ದೋಣಿಯನ್ನು ತಟ್ಟನೆ ಬಿಟ್ಟಿಳಿದರು. ಚಿಕ್ಕವಳು ಅತ್ತಿತ್ತ ನೋಡಿ ದಾರಿಯನ್ನು ಗುರುತುಹಿಡಿದವಳನ್ನೆ ಮುನ್ನರಿದು ಹೊರ ಟಳು. ದೊಡ್ಡವಳು ಆ ದೋಣಿಯ ಹಗ್ಗವನ್ನು ದಡದಲ್ಲಿದ್ದ ಒಂದು ಗಿಡದ ಬುಡಕ್ಕೆ ಕಟ್ಟ ಕೂಡಲೇ ಅವಳನ್ನು ಹಿಂಬಾಲಿಸಿ ಚಿಕ್ಕವಳನ್ನು ಕುರಿತು, “ಎಲ್‌, ಜಗನ್ನೋಹಿನೀ, ಮಹಾನುಭಾವರಾದ ಕುಶನಾಭರ ಆಶ್ರಮವು ಇಲ್ಲಿಗೆ ಎಷ್ಟು ದೂರದಲ್ಲಿರುವುದು ?” ಎನ್ನು ಕೇಳಿದಳು. - ಮೋಹಿನೀ-ತನ್ನ ಕೈಯನ್ನೆತ್ತಿ, “ಅದು ಬಹಳ ದೂರವಿಲ್ಲ. ಅದೋ ನೋಡು ! ಅಲ್ಲಿ ಕಾಣುವ ಆ ಮಾವಿನತೋಪಿಗೆ ಬಲಗಡೆ ಅಗ್ನಿ ನಲ್ಲಿ ಒನ್ನು ಬಾಳೆಯ ತೋಟ ಕಾಣುತ್ತದೆಯಲ್ಲಾ ಅದೇ ಆ ತಪೋನಿಧಿ ಗಳ ಆಶ್ರಮ, ಇನ್ನು ನೀನು ಕೊಂಚ ಜಾಗ್ರತೆಯಾಗಿ ಕಾಲು ಹಾಕು; ಸಾಕಾಲದೊಳಗಾಗಿ ನಾವು ಅಲ್ಲಿಗೆ ಹೋಗಿ ಸೇರಿಬಿಡೋಣ ; ಏತ ಕಂದರೆ, ಮಹರ್ಷಿಗಳೆಲ್ಲರೂ ಆ ಸಮಯದಲ್ಲಿ ಸಾವನ್ದನಾದಿ ವಿಧಿ