ಪುಟ:ಜಗನ್ಮೋಹಿನಿ .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ಜಗನ್ನೋಹಿನಿ. +++ * * * * * * * • • •

  • * * * * * * */* *-YY

ನಿಯು, ಆಹಾ ! ಏನಿದು ? ಯಾರೋ ಅಸತಿಯರು ನನ್ನ ತಪ ಸ್ಸಿಗೆ ವಿಘ್ನ ವನ್ನು ಮಾಡಲುಜ್ಜುಗಿಸಿರುವಂತೆ ಕಾಣುತ್ತದೆ. ಎಂದು ಕಣ್ಣು ಬಿಟ್ಟು ತಟ್ಟನೆ ಎದ್ದು ನಿಂತು ಆ ಮಾನಿನಿಯ ರನ್ನು ದರುದುರನೆ ನೋಡಿ ಕಡುಕೋಪದಿಂದ, ಎಲೇ, ಈಯಾಶ್ರಮದಲ್ಲಿ ಹೆಂಗಳೆಯ ಯರಿಗೆ ಪ್ರವೇಶವಿಲ್ಲ ವೆಂಬುದು ನಿಮಗರಿಕೆ ಇಲ್ಲ ವೋ ? ಎಂದನು. ಈ ಮಾತಿಗೆ ಆ ಮಾನಿನಿಯರು ಬೆದರಿ ಬೆವರಿ ಬೆಂಡಾಗಿ ಉಡಗಿ ಥರ ಥರನೆ ನಡುಗುತ್ತಾ, ನಮ್ಮ ಅಪರಾಧವನ್ನು ಮನ್ನಿ ಸಬೇಕು ! ಮ ಹಾಸ್ವಾಮಿಾ ! ಈ ಪ್ರತಿಷೇಧವು ನಮಗೆ ಸತ್ಯವಾಗಿ ಗೊತ್ತಿರಲಿಲ್ಲ.” ತಪಸ್ವಿ:- ಓಹೋ! ಇಂತಹ ಲೋಕಪ್ರಸಿದ್ದವಾದ ಸಮಾಚಾ ರವು ನಿಮಗೆ ಗೊತ್ತಿರಲಿಲ್ಲ ವೋ ! ಸಮಯಕ್ಕೆ ತಕ್ಕಂತೆ ಸುಳ್ಳಾಡು ವುದರಲ್ಲಿ ಹೆಂಗಸರಿಗಿಂತಲೂ ನಿಪ್ಪಣರಾರೂ ಇಲ್ಲ ! ಒಳ್ಳೆಯದಿರಲಿ ; ನೀವಾರು ? ಆ ಹೆಂಗಸರು:- ನಾವು ಪದ್ಯ ದ್ವೀಪದ ಸೇವಕರು.

  • ತಪಸ್ವಿ: ಪದ್ಮದ್ವೀಪವೆಂಬುದಾವುದು ? ಅದೆಲ್ಲಿದೆ ? ಎಂ ದೆಂದುಕೊಂಡು, ಕೊಂಚಧ್ಯಾನಿಸಿ, ಓಹೋ ! ಆ ಕುಲಪತಿಗಳಾದ ಅರವಿಂದಬಾಂಧವರ ತಪಃಪ್ರಭಾವದಿಂದ ನಿರ್ಮಿಸಲ್ಪಟ್ಟು ದಲ್ಲವೆ ಆ ಪದ್ಮದ್ವೀಪವೆಂಬುದು ?

ಹೆಂಗಸರು:-ಅಹುದು ಮಹಾಸ್ವಾಮಿಾ. ತಪಸ್ವಿ:- ಓಹೋ ! ಈ ಭೂಮಂಡಲದಲ್ಲಿ ಮಹಾ ಯೋ ಗಿಗಳ ತಪಶ್ಯಕ್ತಿಗೆ ಆ ಪದ್ಮದ್ವೀಪವು ನಿದರ್ಶನವಾಗಿದೆ. ಒಳ್ಳೆಯದು ! ಆ ಕುಲಪತಿಗಳ ಕುಮಾರಿಯಾದ ಜಗನ್ನೋಹಿನಿ ಎಂಬಾಕೆಯು ಅಲ್ಲಿ ಸುರಕ್ಷಿ ತಳಾಗಿರುವಳೆ ?