ಪುಟ:ಜಗನ್ಮೋಹಿನಿ .djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ಜಗಿ ನೋಹಿನಿ.

  • * * * * *
  • * * * \

• • • • •••••r - - - - - - - ಚಿತ್ರಲೇಖೆ..ನಾವು ಮಹಾನುಭಾವರಾದ ಕುಶನಾಭರ ಪಾದ ಸಂದರ್ಶನಕ್ಕೋಸ್ಕರವಾಗಿ ಬಂದಿರುವೆವು. ತಪಸ್ವಿ.ಕುಶನಾಭರು ತಮ್ಮ ಸಂದರ್ಶನಕ್ಕೆ ಬಂದಿದ್ದ ಆದಿತ್ಯವರ್ಮನನ್ನು ಸಂಗಡ ಕರೆದುಕೊಂಡು ಸಾಯಂ ಸಂಧ್ಯಾವಂ ದನೆಯನ್ನು ಆಚರಿಸುವುದಕ್ಕೆ ಗಂಗೆಗೆ ಹೋದರು. ಚಿತ್ರಲೇಖೆ..... ಪುನಃ ಈಯಾಶ್ರಮಕ್ಕೆ ಬರುವರೋ ? ಇಲ್ಲವೋ ? ತಪಸ್ಸಿ- ಅವರು ಕೈಲಾಸಕ್ಕೆ ಹೋದರೂ ಔಪಾಸನದ ವೇಳೆಗೆ ಇಲ್ಲಿಗೆ ಬಾರದೇ ಇರುವುದಿಲ್ಲ. ಚಿತ್ರಲೇಖೆ--ಹಾಗಾದರೆ, ಅವರು ಇಲ್ಲಿಗೆ ದಯಮಾಡಿಸುವು ದಕ್ಕೆ ಇನ್ನೆಷ್ಟು ಹೊತ್ತಾಗುವುದು ?

  • ತಪಸ್ವಿ-ಇನ್ನೆಲ್ಲಾ ಒಂದು ಗಳಿಗೆಯೊಳಗಾಗಿ ಬಂದುಬಿ ಡುವರು. ಓಹೋ ! ನಿಮ್ಮ ಸಂಗಡ ಮಾತನಾಡುತ್ತಾ ನಾನು ನನ್ನ ಕೈ೦ಕರ್ಯವನ್ನು ಮರೆತು ಹೋಗುತ್ತಿದ್ದೆನು, ಇನ್ನೆ (ನು ಗುರು ಗಳು ಬಂದು ಬಿಡುವರು, ನೀವು ಅದುವರೆಗೂ ಅವರ ಈ ಸರ್ಣ ಶಾಲೆಯ ವರ್ಸಾ ಯಲ್ಲಿ ಕುಳಿತುಕೊಂಡು ಎಶ್ರಮಿಸಿಕೊಳ್ಳಿರಿ, ನಾನು ಅಷ್ಟರಲ್ಲಿಯೇ ಈ ಸರೋವರದ ಕಡೆಗೆ ಹೋಗಿ ನಮಿತ್ತು ತೆಗಳನ್ನು ತೆಗೆದುಕೊಂಡು ಬರುವೆನು.

ಆ ಸುದತಿಯರೀರ್ವರೂ (ಅಪ್ಪಣೆಯನಾಗಲಿ, ಎಂದು ಅಲ್ಲಿ ಹೋಗಿ ಕುಳಿತುಕೊಂಡರು, ಆ ತಪಸ್ವಿಯು ಸರೋವರದ ಕಡೆಗೆ ಬಿರಬಿರನೆ ಹೊರಟುಹೋದನು. ಆ ಸಮಯದಲ್ಲಿ ರಜನೀಶನ ರಶ್ಮಿಗಳಿಂದ ದಿಕ್ಕು ದಿಕ್ಕುಗಳಲ್ಲಿ