ಪುಟ:ಜಗನ್ಮೋಹಿನಿ .djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ ಆ೫ 4WArvvvvvvvv • ••••A

ಧೈರ್ಯವನ್ನು ಅವಲಂಬಿಸಿ ಆ ಪರ್ಣಕುಟೀರದ ಪಾರ್ಶ್ವದಲ್ಲಿದ್ದ ಒಂದು ಮರದ ಪೊಟ್ಟರೆಯಲ್ಲಿ ತಟ್ಟನೆ ಅವಿತುಕೊಂಡಳು. ಆ ಸಮಯದಲ್ಲಿ ಆ ಪೊಟ್ಟರೆಯು ಆಕೆಯ ದೃಷ್ಟಿಗೆ ಬಿದ್ದು ದೊಂದು ಸೋಜಿಗವಾಗಿದೆ. .ಆ ಪೊಟ್ಟರೆಯು ಮೊದಲಿಂದಲೂ ಅಲ್ಲಿಯೇ ಇದ್ದಿತೋ ಅಥವಾ ಆ ವನದೇವತೆಯೇ ಆಕೆಗಾಗಿ ಆ ಕ್ಷಣದಲ್ಲಿ ನಿರ್ಮಾಣಮಾಡಿದಳೊ ಹೇಳಲಸದಳವಾಗಿದೆ, ಬಹುತರವಾಗಿ ದೇವನಿರ್ಮಿತವಾಗಿರಬಹುದು ; ಅದೇತಕ್ಕೆಂದರೆ, ಅಂತಹ ವೊಟ್ಟರೆಯು ಮೊದಲಿನಿಂದಲೂ ಅಲ್ಲಿ ಇದ್ದಿದ್ದರೆ ಆ ತಪಸ್ವಿ ಯು ಆಕೆಯನ್ನು ಅದರಲ್ಲಿ ಹುಡುಕದೇ ಬಿಡುತ್ತಿ ರಲಿಲ್ಲ ; ಇದಲ್ಲದೇ, ಅತೀಂದ್ರಿಯರಾಗಿ ಮಾನವರ ಧರ್ಮಾ ಧರ್ಮವನ್ನು ಪರಿಶೀಲಿಸುವ ದೇವತೆಗಳು ಧಾರ್ಮಿಕರನ್ನು ಎಂದಿಗೂ ಕೈಬಿಡುವುದಿಲ್ಲ. ಚಿತ್ರಲೇಖೆಯು ಆ ಭಯಂಕರವಾದ ರಾತ್ರಿಯಲ್ಲಾ ಆ ಪೊಟ್ಟ ರೆಯಲ್ಲಿಯೇ ಜಾಗರಣೆಮಾಡಿ ಮಾರನೆಯದಿನ ಅರುಣೋದಯವಾದ ಕೂಡಲೇ ಕಿರಾತನ ಕೈಯಿಂದ ತಪ್ಪಿಸಿಕೊಂಡಿದ್ದ ಶಶಶಾವಕದಂತೆ ಅಲ್ಲಿಂದ ಹೊರಹೊರಟಳು, ಈಕೆಯ ಕಣ್ಣಿಗೆ ಮೊಟ್ಟ ಮೊದಲು ಆ ತಪಸ್ವಿ ಯು ಆ ಪರ್ಣಶಾಲೆಯ ಪರಿಸರದಲ್ಲಿ ಬೀಸಾಡಿದ್ದ ಕಾವಿಯ ಬಟ್ಟೆ, ಜಟಾ ಮುಂತಾದ ಸನ್ಯಾಸಿ ವೇಷದ ಸಾಮಗ್ರಿಗಳು ಕಾಣಿಸಿ ದುವು. ಆ ಕ್ಷಣದಲ್ಲಿಯೇ ಆಕೆಯು ಸನ್ಯಾಸಿ ವೇಷವನ್ನು ತಾಳಿ ತನ್ನ ಉಡುಗೆತೊಡಿಗೆಗಳನ್ನು ಕಳಚಿ, ಆ ಪೊಟ್ಟರೆಯಲ್ಲಿ ಕಟ್ಟಿಟ್ಟು ಆ ವೇಷಕ್ಕೆ ಕಡಮೆಯಾಗಿದ್ದ ಅಲ್ಲಿದ್ದ ಭಸ್ಮವನ್ನು ಮೈಗೆಲ್ಲಾ ಬಳದು ಕೊಂಡು ಸರ್ವ ಪ್ರಯತ್ನದಿಂದಲೂ ತನ್ನ ಸ್ವಾಭಾವಿಕವಾದ ಆಕಾರವ ನ್ನು ಮರೆಮಾಚಿಕೊಂಡು ನಿರ್ಭಯಳಾಗಿ ದಿಕ್ಕು ತೋಚದವಳಾಗಿದ್ದ 24