ಪುಟ:ಜಗನ್ಮೋಹಿನಿ .djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ, ೧೮೯ vvvvvy rssy~ • » ಒಡೆಯ :-ಅದಕ್ಕೆ ನಾನೇ ನಿದರ್ಶನವಾಗಿರುವೆನಲ್ಲಾ. ಒಳ್ಳೆಯದು, ಅದು ಹಾಗಿರಲಿ, ಮುಂದೆ ನನ್ನ ಮನೋರಥಸಿದ್ದಿಗೆ ಮಾಡುವದೇನು ? - ಮಿತ್ರ:- ಅದಕ್ಕೆ ಮಾಡಬೇಕಾದುದೇನಿದೆ ? ನನ್ನ ಅಪರಾಧ ವನ್ನು ಮನ್ನಿಸಬೇಕೆಂದು ಪೂಜ್ಯರಾದ ಕುಶನಾಭರಿಗೆ ಮೊರೆ ಇಟ್ಟರೆ ನಿನ್ನ ಮನೋರಥವು ಕ್ಷಿಪ್ರದಲ್ಲಿ ನೆರವೇರುತ್ತದೆ. - ಒಡೆಯ:-ಆಗ ನಾನು ಅವರ ಮಹದಾಜ್ಞೆಯನ್ನು ಆ ರೀತಿ ಯಾಗಿ ಉಲ್ಲಂಘಿಸಿ ಈಗ ಅವರಿಗೆ ಮುಖವನ್ನು ಹೇಗೆ ತೋರಿಸಲಿ ? ತಪೋನಿಷ್ಠರಾದ ಅವರು ಒನ್ನು ವೇಳೆ ನಮ್ಮ ಅತಿಕ್ರಮ ಪ್ರವೇಶ ದಿನ ಕುಪಿತರಾಗಿ ಏನಾದರೂ ಶಾಪವನ್ನು ಕೊಟ್ಟರೆ ಗತಿಯೇನು ? ಮಿತ್ರ:-ಕರುಣಾಸಮುದರಾದ ಮುನಿಜನರು ಶರಣಾಗ ರಾದವರ ಮೇಲೆ ಎನ್ಸಿಗೂ ಕೋಪಿಸಿಕೊಳ್ಳುವುದಿಲ್ಲ, ನಡೆ, ನಾವಿನ್ನು ತಡಮಾಡದೇ ಕುಶನಾಭರ, ಆಶ್ರಮಕ್ಕೆ ಹೋಗೋಣ. ಆ ಮಾತಿಗೆ ಒಡೆಯನು ಒಡಂಬಟ್ಟು ಕುಶನಾಭರ ಅಶ್ರಮದ ಕಡೆಗೆ ಹೊರಟನು, ಉಳಿದ ಈರ್ವರೂ ಅವನನ್ನು ಹಿಂಬಾಲಿಸಿದರು. ಇವರ ಸಂಭಾಷಣೆಯನ್ನು ಮರೆಯಲ್ಲಿ ನಿಂತು ಕೌತುಕದಿಂದ ಕೇಳುತ್ತಿದ್ದ ಚಿತ್ರಲೇಖೆಯು ತನ್ನಲ್ಲಿ ತಾನು, : ಈ ಒಡೆಯನೇ ನಮ್ಮ ಜಗನ್ನೋಹಿನಿಯ ಮೋಹಕನು; ಈತನೂ ಆ ಜಗನ್ನೊಹಿನಿಯಂತೆ ಆಕೆ ಯನ್ನು ಸ್ವಷ್ಟ ದಲ್ಲಿ ಕಂಡು, ವಿರಹ ವ್ಯಥೆಯನ್ನು ಅನುಭವಿಸುತ್ತಿರು ವನು, ಇವರೀರ್ವರ ಗರ್ವಭಂಗಕ್ಕಾಗಿ ಆ ತಪೋನಿಧಿಗಳು ಈ ಸಂಗತಿಗ ಳಿಗೆ ಅವಕಾಶಕೊಟ್ಟಿರುವ ಹಾಗೆ ಕಾಣುತ್ತದೆ, ಒಳ್ಳೆಯದಿರಲಿ.” ಎನ್ನ ನ್ನು ಕೊಂಡು ಪ್ರಯಾಣೋನ್ಮುಖರಾದ ಅವರಿದಿರಿಗೆ ಹೋದಳು, ಈಕೆಯ