ಪುಟ:ಜಗನ್ಮೋಹಿನಿ .djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ. ೧೯೧ ••••••••••••• • • • • •••••••y ಆದಿತ್ಯ:- ಮಹಾಸ್ವಾಮಿಾ, ತಾವು ನನ್ನಲ್ಲಿ ಕೃಪೆಮಾಡಿ ನನಗೆ ತಮ್ಮ ಗುರುಗಳ ಸಂದರ್ಶನವನ್ನು ಮಾಡಿಸುವುದಾದರೆ, ನಾನೂ ತಮ್ಮ ಸಂಗಡಲೇ ಬರುವೆನು. ಯೋಗೀಶ್ವರ:-ಓಹೋ! ಇದೇನಾಶ್ಚರ್ಯ! ಎಲೈ, ನೀನು ಮೊನ್ನೆ ರಾತ್ರಿ ನಮ್ಮ ಆಶ್ರಮದಲ್ಲಿಯೇ ಇದ್ದು ನಮ್ಮ ಗುರುಗಳ ಸಂ ಗಡ ಸಂಭಾಷಣೆಯನ್ನು ಮಾಡಿ ಮಾರನೆಯ ದಿನ ಅವರ ಅನುಜ್ಞೆ ಯನ್ನು ಪಡೆದು ಬಂದೆಯಲ್ಲವೆ? ಪುನಃ ಇಷ್ಟು ತೀವ್ರವಾಗಿ ಅವರನ್ನು ನೋಡಬೇಕಾದ ಉದ್ದೇಶವೇನು? ಎಂದು, ಈ.ಬಾಗಿ ನಿಂತಿದ್ದ ಆದಿತ್ಯ ವರ್ಮನ ಮುಖವನ್ನು ಒಂದು ಕ್ಷಣ ಸಂವೀಕ್ಷಿಸಿ, ಓಹೋ! ಆ ಯೋ `ಗೀಶನನ್ನಿನಿಯ ವೈವಾಹಿಕ ಪ್ರಸಂಗಕ್ಕಾಗಿಯೋ ? ಆದಿತ್ಯ: ಯೋಗೀಶ್ವರರಿಗೆ ವೇದ್ಯವಿಲ್ಲದ್ದು ಆವುದಿದೆ ?' - ಯೋಗೀಶ್ವರ: - ಆ ಜಗನ್ನೋಹಿನಿಯನ್ನು ತಿರಸ್ಕಾರವಾಡಿ ದ್ದಕ್ಕಾಗಿ ನಿನಗೀಗ ಪಶ್ಚಾತ್ತಾಪ ಉಂಟಾದ ಹಾಗಿದೆ. ಲೌಕಿಕ ವ್ಯವಹಾರದಲ್ಲಿ ಸಮಯಚ್ಯುತಿಯಾದ ಬಳಿಕ ಪಶ್ಚಾತ್ತಾಪಡುವುದರಿಂದ ಫಲವೇನು? ಪಶ್ಚಾತ್ತಾಪವು ಕೇವಲ ತಪಿಸುವವನ ಬುದ್ದಿಗೇಡಿತನವನ್ನು ಪ್ರಕಟಿಸುತ್ತದೆ. ಆದರೆ, ಮಾಡಿದ ಪಾಪಕ್ಕೆ ಪಶ್ಚಾತ್ಯಾಸಕ್ಕಿಂತಲೂ ಉತ್ತಮವಾದ ಪ್ರಾಯಶ್ಚಿತವಿಲ್ಲ. ಒಳ್ಳೆಯದು, ಈ ಪ್ರಸಂಗದಲ್ಲಿ ಆ ಮಹಾ ಸಾದ್ವಿಯಾದ ಮುನಿ ಕುಮಾರಿಗೆ ಸಂಭವಿಸಿದ ವ್ಯಾಪತ್ತಿಯು ನಿನಗೆ ಗೊತ್ತಿದೆಯೇ ? ಆದಿತ್ಯವರ್ಮ:-ಆಕೆಗೆ ವಿಪತ್ತು ಸಂಭವಿಸಿತೇನು ? ಯೋಗೀಶ್ವರ:- ಅಪಹೃತಳಾಗುವುದಕ್ಕಿಂತಲೂ ಅಧಿಕವಾದ ವಿಪತ್ತು ಯಾವದಿದೆ?