ಪುಟ:ಜಗನ್ಮೋಹಿನಿ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪರಿಚಿತವ್ಯಕ್ತಿ ನೀರು ಮಂಡಿಯ ಮಟ್ಟಕ್ಕಿಂತಲೂ ಹೆಚ್ಚಾಗಿರಲಿಲ್ಲ ; ನಿಂತನೀರಿ ನಂತೆ ನಿದಾನವಾಗಿ ಹರಿಯುತ್ತಿದ್ದಿ ತು, ನಡುಹೊಳೆಯಲ್ಲಿ ಅವನು ಬಗ್ಗಿ ಪಶುವಿನಂತೆ ನೀರು ಕಡಿದನು. ಕುಡಿದೇಳುವಾಗ ಸಂಧ್ಯಾ ಕಾಲದ ಅರುಣ ಕಿರಣ ಸಂಪರ್ಕದಿಂದ ಆ ನೀರಿನಲ್ಲಿ ಪ್ರತಿಬಿಂಬಿತ ವಾದ ಅವನ ಆಕಾರವು ಅವನ ಕಣ್ಣಿಗೆ ಬಿದಿ ತು, ಅದನ್ನು ಬಿರಬಿರನೆ ನೋಡುತ್ತಾ ಒಂದು ಗಳಿಗೆ ನಿ೦ತನ . - ಆಗ ಅವನ ಮೊಗದಲ್ಲಿ ವಿಕಾಸವೂ ಹಂಸವೂ ವಿಕಾರವೂ ಒ೦ ದರಮೇಲೊಂದು ತೋರಿದವು. ಆದರೆ, ಉತ್ತರ ಕ್ಷಣದಲ್ಲಿಯೇ ಅವನು ಪ್ರಕೃತಿಸ್ಸನಾಗಿ ಎಡಗೈಯಿಂದ ತನ್ನ ಕುಡಿಮೀಸೆಯನ್ನು ತೀಡಿಕೊಳ್ಳು ತ್ಯಾ ಆಸ್ಪಷ್ಟವಾದ ಏನೋ ಕೆಲವು ಮಾತುಗಳನ್ನು ಆಡಿಕೊಂಡು ಹೊಳೆಯನ್ನು ದಾಟಿ ಮುಂದಕ್ಕೆ ಹೊರಟನು. ಅಲ್ಲಿಂದಾಚೆಗೆ ದಾರಿಯು ಬಹಳ ಒಡಬಲಾಗಿಯೂ ನಿಬಿಡ ನಾದ ತರುಚ್ಚಾಯೆಯಿಂದ ಮಬ್ಬಾಗಿಯೂ ಇದಿ ತು, ಆದರೂ ಆ ಮಹಾಪುರುಷನು ಕಾಡುಮೃಗದಂತೆ ಹಳ್ಳಕೊಳ್ಳಗಳನ್ನೂ ಗಿಡ ಗೆಂಟೆಗಳನ್ನೂ ಲೆಕ್ಕಿಸದೇ ನೆಟ್ಟಗೆ ನಡುಬೆಟ್ಟಕ್ಕೆ ಹೋಗಿ ಸೇರಿದನು. ಆ ವೇಳೆಗೆ ಪ್ರಪಂಚವೆಲ್ಲಾ ಗಾಢಾಂಧಕಾರದಲ್ಲಿ ಪೂರ್ತಿ ಯಾಗಿ ಮುಳುಗಿ ಹೋಯಿತು. ಅಂತಹ ನಿಬಿಡವಾದ ಕಾಡಿನಲ್ಲಿ ಇನ್ನೂ ಹೊತ್ತಿರುವಾಗಲೇ ಎತ್ತಲೂ ದಾರಿತೋರದಂತೆ ಕತ್ತಲು ಕವಿತುಕೊಳ್ಳುವುದು ಸ್ವಾಭಾವಿಕವಾಗಿಯೇ ಇದೆ ; ಹೊತ್ತು ಮುಳುಗಿದಮೇಲೆ ಹೇಳ ಬೇಕೇ ? ಇದಲ್ಲದೆ ಅಲ್ಲಿ ಆ ಹೊತ್ತಿನಲ್ಲಿ ಹುಲಿ, ಕರಡಿ, ಆನೆ ಮೊದಲಾದ ದುಷ್ಟ ಮೃಗಗಳ ಅಬ್ಬರವು ಆ ಬೆಟ್ಟದ ಗುಹೆಗಳಲ್ಲಿ ನೆಲೆಗೊಂಡು ದಾರಿಗರಯದೆ ನಡುಗುವಂತೆ ಭೋರೆಂದು ಕೇಳ ಬರುತ್ತಿದ್ದಿತು.