ಪುಟ:ಜಗನ್ಮೋಹಿನಿ .djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಜಗನ್ನೋಹಿನಿ. ಆದಿತ್ಯ:-ಹಾ! ಜಗನ್ನೋಹಿನಿಯು ಅಪಹೃತಳಾದಳೇ ? ಯೋಗೀಶ್ವರ:-ಅಹುದಯ್ಯಾ ! ಆ ಮಹಾ ಯೋಗಿಗಳಾದ ಅರವಿನ್ದ ಬಾನ್ದವರ ಪ್ರಿಯನನ್ನಿನಿಯಾದ ಜಗಕ್ಕೋಹಿನಿಯೇ ಅಪಹೃ ತಳಾದಳು. ಆದಿತ್ಯ;- ಅದೆಂದು ? ಯೋಗೀಶ್ವರ:-ನಿನ್ನೆ ರಾತ್ರಿ; ನಿನ್ನೆ ರಾತ್ರಿಯೇ, ಆದಿತ್ಯ:-ಅದು ಹೇಗೆ? ಯೋಗೀಶ್ವರ:- ಆಕೆಯ ನಿನ್ನ ನೆಯೇ ಕುಶನಾಭರ ಹಿತೋ ಪದೇಶವನ್ನು ಉಲ್ಲಂಘಿಸಿ ಪಶ್ಚಾತ್ತಾಪದಿನ್ದ ಲೂ ವಿರಹತಾಪದಿಂದಲೂ ಸಂತಪ್ತಳಾಗಿ ನಿನ್ನೆ ಸಾಯಂಕಾಲ ಅವರಿಗೇ ಮೊರೆ ಇಡುವುದಕ್ಕೆ ಸಲುವಾಗಿ ಅವರ ಆಶ್ರಮಕ್ಕೆ ಹೋದಳು, ಆ ಸಮಯದಲ್ಲಿ ಅವರು ಅಲ್ಲಿ ಇಲ್ಲದೆ ಇದ್ದುದರಿಂದ ಯಾರೋ ವಂಚಕರು ಅವಳನ್ನು ಮೋಸ ಗೊಳಿಸಿ ಅಪಹರಿಸಿಕೊಂಡು ಹೋದರು. ಆದಿತ್ಯ;-ಇ೦ತಹ ತಪೋವನದಲ್ಲಿ ಅಂತಹ ದುಷ್ಕರ್ಮಗಳು ನಡೆವುದಂದರೇನು? ಯೋಗಿಶ್ವರ:-ದುರಾತ್ಮರ ದುರ್ವ್ಯಾಪಾರವು ಸಾಧುಗಳೆಡೆ ಯಲ್ಲಿ ಅಲ್ಲದೇ ಮತ್ತೆಲ್ಲಿ ನಡೆಯುವುದು? ಆದಿತ್ಯ: .ಆಕೆಯನ್ನು ಅಪಹರಿಸಿದ ಆ ದುರಾತ್ಮರಾರು ? ಯೋಗೀಶ್ವರ:-ಅವರಾರೋ ನನಗೆ ಗೊತ್ತಿಲ್ಲ, ಆದರೆ ಇಷ್ಟು ಮಾತ್ರ ಹೇಳಬಲ್ಲೆನು. ಜಯಭೈರವಾನನ್ದ 1 ಜಯಜಯಭೈರವಾ ನನ್ನ ! 'ಗಿರಿದುರ್ಗಕ್ಕೆ ನಡೆಯಿರಿ ! ” ಎಮ್ಮ ಶಬ್ದ ಮಾತ್ರ ನನ್ನ ಕಿವಿಗೆ ಬಿದ್ದಿತು.