ಪುಟ:ಜಗನ್ಮೋಹಿನಿ .djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ. ೧೯೩ vvvvvvv/

    • *** * * * * *
  • * * * * * * * * * * *

ಈ ಮಾತನ್ನು ಕೇಳಿದ ಕೂಡಲೇ ಆದಿತ್ಯವರ್ಮನು ವೀರಾವೇಶ ದಿಂದ, ವಿನಾಶಕಾಲೇ ವಿಪರೀತ ಬುದ್ದಿ?” ಈಗಲೀಗ ಆ ದುಷ್ಟದಾ ನವನಿಗೆ ವಿನಾಶಕಾಲವು ಸಂಘಟಿಸಿತು, ನಾನಿನ್ನು ಆ ಭೈರವಾ ನಂದನಿಗೂ ಅವನ ಕಡೆಯವರಿಗೂ ಯಮದರ್ಶನವನ್ನು ಮಾಡಿಸಿ ಅವನ ಆ ಹಾಳು ಗಿರಿದುರ್ಗವೆಂಬುದನ್ನು ಧೂಳೀಪಟಲವನ್ನು ಮಾಡದೇ ಬಿಡುವುದಿಲ್ಲ, ಎಂದು ತನ್ನ ಮಿತ್ರನ ಕಡೆಗೆ ನೋಡಿ, «ಎಲೈ, ಆ ಭೈರವಾನಂದನ ವಂಶವನ್ನು ನಾಶಮಾಡುವವರೆಗೂ ನಾನು ನಮ್ಮ ರಾಜಧಾನಿಗೆ ಹೋಗುವುದಿಲ್ಲ ; ಆದುದರಿಂದ ನೀನು ಜಾಗ್ರತೆ ನಮ್ಮ ಪಟ್ಟಣಕ್ಕೆ ಹೋಗಿ ಒಂದಕ್ಕೊಹಿಣೀ ಸೈನವನ್ನು ತೆಗೆದುಕೊಂಡು ಬಾ, ಆ ಭೈರವಾನಂದನನ್ನೂ ಅವನ ಕಡೆಯವ ರನ್ನೂ ಕಾಡು ಹಂದಿಗಳಂತೆ ಬೇಟೆಯಾಡುವ' ಎಂದು ಹೇಳಿದನು, ಕೂಡಲೆ ಆ ಮಿತ್ರನು ಅಪ್ಪಣೆಯಂತಾಗಲಿ.' ಎಂದು ಹೊರಟು ಹೋದನು. ಆಗ ಆ ಯೋಗೀಶ್ವರನು ಆದಿತ್ಯವರ್ಮನನ್ನು ನೋಡಿ, “ಎಲೈ, ಆ ತಪಸ್ವಿನಿಯು ಅಪಹೃತಳಾದ ಸುದ್ದಿಯು ಇನ್ನೂ ಪದ್ಮದ್ವೀಪಕ್ಕೆ ತಿಳಿಯಲಿಲ್ಲ, ಅಲ್ಲಿ ಅಸಂಖ್ಯಾತವಾದ ಸೈನ್ಯವಿದೆ; ಅತಿರಥ ಮಹಾರಥ ರನೇಕರಿದಾರೆ ; ಈ ಸಂಗತಿಯು ಅವರ ಕಿವಿಗೆ ಬಿದ್ದರೆ, ಅವರು ಈ ಅನಾರ್ಯರನ್ನು ಒಂದು ಕ್ಷಣದಲ್ಲಿ ಧ್ವಂಸಮಾಡಿಬಿಡುತ್ತಾರೆ, ದುಷ್ಟ ಸಂಹಾರಕ್ಕೂ ಶಿಷ್ಟ ಪರಿಪಾಲನೆಗೂ ಕೈಲಾದಮಟ್ಟಿಗೂ ಸಹಾಯಮಾ ಡುವುದು ಮಾನವಧರ್ಮ, ಆದುದರಿನ್ನ ನಾನು ಈಗ ಮೊದಲು ಪದ್ಮ ದ್ವೀಪಕ್ಕೆ ಹೋಗಿ, ಅಲ್ಲಿನ ಮಂತ್ರಿಮುಖ್ಯರಿಗೆ ಈ ವೃತ್ತಾಂತವನ್ನು ತಿಳಿಸುವೆನು, ನೀನು ದಯಮಾಡಿ ನನಗೆ ಪದ್ಯ ದ್ವೀಪದ ರೇವಿನದಾರಿ 25