ಪುಟ:ಜಗನ್ಮೋಹಿನಿ .djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୦୨ ಜಗನ್ನೋಹಿನಿ. •••/ 4 ಯನ್ನು ತೋರಿಸಬೇಕು.” ಎನ್ದನು, ಅದಕ್ಕೆ ಆದಿತ್ಯವರ್ಮನು ಒಳ್ಳೆ ಯದು, ಮಹಾಸ್ವಾಮಿಾ, ಹೀಗೆ ದಯಮಾಡಿಸಬೇಕು,” ಎಂದು ರೇವಿನ ಕಡೆಗೆ ಮುಂದರಿದನು, ಯೋಗೀಶ್ವರನು ಆತನನ್ನು ಹಿಂಬಾಲಿ ಸಿದನು, ಸ್ವಲ್ಪ ದೂರ ಹೋದಮೇಲೆ ಉತ್ತುಂಗತರಂಗಮಾಲೆಗಳ ಸಂರಂಭದಿಂದ ಭೋರ್ಗರೆಯುತ್ತಿದ್ದ ಸರಿತ್ಪತಿಯು ಲೋಚನಗೋಚರ ನಾದನು, ಆಗಳಾ ಮುನಿವರನು ಆದಿತ್ಯವರ್ಮನನ್ನು ಕುರಿತು, 11 ಆ ಯುಷ್ಯಂತನೇ, ಇದೋ ನೋಡು ಪದ್ಮದ್ವೀಪದ ರೇವು ಅನತಿ ದೂರದಲ್ಲಿ ಕಾಣುತ್ತದೆ. ಇದಲ್ಲದೇ ಇಲ್ಲಿಂದಾಚೆಗೆ ನನ್ನ ಪಥವು ಸುಪಥವಾಗಿ ರುವ ಹಾಗಿದೆ, ನಾನಿನ್ನು ಅಸಹಾಯನಾಗಿ ನನ್ನ ಸ್ಥಾನವನ್ನು ಸೇರಬ ಲೈನು. ಇನ್ನು ನೀನೂ ನಿನ್ನ ನಿಯೋಗವನ್ನು ಪೂರೈಸುವುದಕ್ಕೆ ಉದ್ಯು ಕನಾಗು, ನಿನ್ನ ಸಹಾಯಕ್ಕೆ ನಾನು ಬಹಳ ಕೃತಜ್ಞನಾಗಿರುವೆನು. ದೇವರು ನಿನಗೆ ವಿಜಯವನ್ನು ಂಟುಮಾಡಲಿ! ಎಂದು ಮುಂದರಿದನು. ಆಗ ಆದಿತ್ಯವರ್ಮನು, “ ಅಪ್ಪಣೆಯಂತಾಗಲಿ.” ಎನ್ನು ಅವರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಹಿಂದಿರುಗಿದನು, --:0:--- ಹದಿನಾಲ್ಕನೆಯ ಪ್ರಕರಣ, ಪಾಣಿಗ್ರಹಣ. ರಸಿಕ ಶಿಖಾಮಣಿಗಳಾದ ನಮ್ಮ ವಾಚಕರು, ಮೊದಲನೆಯ ಪ್ರಕರಣದಲ್ಲಿ ಉದಾಹೃತವಾದ ಭೈರವಾನಂದನ ಗಿರಿದುರ್ಗವನ್ನು ಕೊಂಚ ನೆನಪಿಗೆ ತಂದುಕೊಳ್ಳಬೇಕು, ಈ ದುರ್ಗವು ಸಣ್ಣದೊಂದು