ಪುಟ:ಜಗನ್ಮೋಹಿನಿ .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಣಿಗ್ರಹಣ. ೧೯೫ • ಕ• * * - * * * * * * ಇ ಬೆಟ್ಟದ ಕೊಟ್ಟ ಕೊನೆಯಲ್ಲಿ ಕಟ್ಟಲ್ಪಟ್ಟಿದ್ದಾಗ್ಯೂ ಅದು ಎಲ್ಲಿಂದಲೂ ಮಾನರ್ವಮಾನ್ಯರ ದೃಷ್ಟಿಗೆ ಗೋಚರವಾಗುತ್ತಿರಲಿಲ್ಲ, ಇದಕ್ಕೆ ಕಾರಣವು, ಅದರ ಸುತ್ತಮುತ್ತಲೂ ಗಗನ ಚುಮೀತವಾಗಿ ಬೆಳೆದಿದ್ದ ಕಾಡುಮರಗಳ ಸಮ್ಪಣಿಯನ್ನೇ ಅಲ್ಲ : ಆದರೆ, ಅದನ್ನು ಕಟ್ಟಿದ್ದ ಸ್ಥಳವಿಶೇಷವು ಮುಖ್ಯವಾಗಿದ್ದಿತು. ಈ ಕೋಟೆಯ ನಟ್ಟನಡುವೆ ಕಟ್ಟಲ್ಪಟ್ಟಿದ್ದ ಅರಮನೆಯ ಚನ್ದ್ರ ಶಾಲೆಯಲ್ಲಿ ನಿಂತುನೋಡತಕ್ಕವರ ಕಣ್ಣಿಗೆ ಸುತ್ತ ಒದ್ದು ಗಾವುದ ಭೂ ಪ್ರದೇಶದಲ್ಲಿದ್ದ ಸಮಸ್ತ ವಸ್ತು ಗಳೂ ಕರತಳಾಮಲಕದನೆ ಕಾಣುತ್ತಿದ್ದುವು. ಇದುವೇ ಆ ಭೈರವಾ ನನ್ನನ ಶಯ್ಯಾಗೃಹ, ಇದನ್ನು ಕಟ್ಟಿ ಸಿದ ಪುಣ್ಯಪುರುಷನು ಆ ಸ್ಥಳ ವನ್ನು ಹೇಗೆ ಕಂಡು ಹಿಡಿದನೋ! ಬಹುಶಃ, ಉರುಮನಿಗಳಾದ ಎಷ ಜನ್ನುಗಳಿಗೂ ದುಷ್ಟಮೃಗಗಳಿಗೂ ತಮ್ಮ ತಮ್ಮ ಗೋಪ್ಯವಾದ ವಾಸಸ್ಥಳಗಳನ್ನು ಹುಡುಕಿಕೊಳ್ಳುವ ಬುದ್ದಿ ಯು ಸ್ವಾಭಾವಿಕವಾಗಿ ರುವನೆ ಜಾರಚೋರರಿಗೂ ರಹಸ್ಯವಾದ ಸ್ಥಳಗಳನ್ನು ಹುಡುಕಿಕೊ ಳ್ಳುವ ಕೌಶಲ್ಯವು ಸ್ವಾಭಾವಿಕವಾಗಿರುವಂತೆ ಕಾಣುತ್ತದೆ. ಪ್ರಪಂಚದಲ್ಲಿ, ಸಂಪತ್ತಾಗಲೀ ವಿಪತ್ತಾಗಲೀ ಅತಾಸನ್ನ ವಾ ಗಿದ್ದಲ್ಲಿ ಅವುಗಳಿಗೆ ವಿಷಯನಾಗಿದ್ದ ಪ್ರಾಣಿಯ ಮನಸ್ಸಿಗೆ ಸ್ವಾಸ್ಥ ವಿರುವುದಿಲ್ಲ, ಸಂಪತ್ತು ಸಂಭವಿಸುವುದಾಗಿದ್ದರೆ, ಮನಸ್ಸಿಗೆ ಅನಿರ್ವಾ ಟ್ಯವಾದ ಉಲ್ಲಾಸವು ಉಂಟಾಗುತ್ತದೆ, ವಿಪತ್ತು ಸಂಭವಿಸುವು ದಾಗಿದ್ದರೆ, ಮನಸ್ಸಿಗೆ ಅನಿರ್ವಚನೀಯವಾದ ಕಳವಳವು ಉಂಟಾಗು ತದೆ. ಈ ಸಂಪದ್ವಿಪತ್ತುಗಳ ಸಂಭವವು ಶಾಸ್ತ್ರರೀತ್ಯಾ ಕರ್ಮಾ ನುಗುಣವಾಗಿದ್ದರೂ ಈ ವಿಧವಾದ ಅವುಗಳ ಸೂಚನೆಯು, ಕರ್ಮಿ ಯು ಅವುಗಳಿಗೆ ತಕ್ಕಂತೆ ತನ್ನ ಸ್ಥಿತಿಯನ್ನು ಸರಿಪಡಿಸಿಕೊಳ್ಳುವುದಕ್ಕೆ