ಪುಟ:ಜಗನ್ಮೋಹಿನಿ .djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಣಿಗ್ರಹಣ. ೧೯೭ ೬ ೪ * * * * * * - * * * *v/wwM ಒ ಭೈರವಾನನ್ದ :-ಅಯ್ಯೋ!ಮುಟ್ಟಾಳಾ, ನೀರೇತಕ್ಕೆ ಸುರಿಸಿದೆ? ಸೇನಾನಾಯಕ:-ಉರಿಯನ್ನು ಆರಿಸುವುದಕ್ಕೆ, ಭೈರವಾನನ್ದ :-ಉರಿ ಯಾವುದು? ಬೇಗನೆ ಬೊಗಳು, ಸೇನಾನಾಯಕ:-ಒಡೆಯನೇ, ನಿನ್ನೆ ರಾತ್ರಿ ನಾವು ಕುಶನಾ ಭರ ಆಶ್ರಮದಿಂದ ಆ ಹೆಂಗಸನ್ನು ಸಾಗಿಸಿಕೊಂಡು ಬನ್ದ ಗಾಡಿಯು ಅಕಸ್ಮಾತ್ತಾಗಿ ಹತ್ತಿ ಕೊಂಡು ಉರಿಯಲಾರಂಭಿಸಲಿಲ್ಲವೆ ? ಭೈರವಾನನ್: ನೀನೇನೊ ಕನಸುಕಂಡು ನಿರ್ದೆಗಣ್ಣಿನಲ್ಲಿ ಓಡಿಬನ್ನು ಬಾಯಿಗೆ ಬಂದನೆ ಬೊಗುಳುತ್ತಿರುವಂತಿದೆ. ಉರಿಯು 'ಹತ್ತಿ ಕೊಂಡುದು ಯಾವಾಗ ? ಸೇನಾನಾಯಕ:-- ನೀನು ಮೂರ್ಛಿತನಾದ ಕೂಡಲೇ ಹತ್ತಿ ಕೊಂಡಿತೆಂದು ನೀನು ಪ್ರಜ್ಞೆ ತಿಳಿದಿದ್ದಾಗ ನಾನು ಅರಿಕೆಮಾಡಲಿಲ್ಲ ವೇ? ಭೈರವಾನನ್ದ :-ಈಗ ಸದ್ಯಕ್ಕೆ ನಿನಗೆ ಪ್ರಜ್ಞೆ ತಪ್ಪಿರುವ ಹಾಗಿದೆ! ಎಲವೋ, ಹುಚ್ಚಾ, ನಿನಗಿನ್ನೂ ಮದ್ಯದ ಮದ ಇಳಿದ ಹಾಗೆ ಕಾಣಿಸಲಿಲ್ಲ, ನಾನು ಮೂರ್ಛಿತನಾದುದು ಯಾವಾಗ ? ಸೇನಾನಾಯಕ:- ನಿನ್ನ ಕಾಲಿಗೆ ಹೆಬ್ಬಾವು ಸುತ್ತಿಕೊಂಡಾಗ ಭೈರವ:-ನೀನೇನು ಆಶ್ಚರ್ಯದ ಮೇಲಾಶ್ಚರ್ಯವನ್ನು ಹೇಳುತ್ತಿರುವೆ. ಅದು ಯಾವಾಗ ? ಸೇನಾನಾಯಕ:-ನೀನು ಗಾಡಿಯ ಮೇಲಿನಿಂದ ಇಳಿದು ಒಳಗಿದ್ದ ಹೆಂಗಸನ್ನು ಈಚೆಗೆ ತೆಗೆದುಕೊಳ್ಳಬೇಕೆಂದು ಗಾಡಿಯ ಬಾಗಿಲನ್ನು ತೆಗೆಯುವುದಕ್ಕೆ ಹೋದಾಗ ನಿನ್ನ ಕಾಲಿನಿಂದ ತಲೆಯವ ರಿಗೂ ದೊಡ್ಡದೊಂದು ಹಾವು ಸುತ್ತಿಕೊಳ್ಳಲಿಲ್ಲವೆ? ಅದನ್ನು ನಾವು