ವಿಷಯಕ್ಕೆ ಹೋಗು

ಪುಟ:ಜಗನ್ಮೋಹಿನಿ .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಣಿಗ್ರಹಣ ೧೯೯ , , , , , , 42 7 + + y* * * * * * * ಗೂ ಇಲ್ಲದ ಈ ಬೇಟೆಗಾರರ ಸನ್ಮಣಿಯ ಇವೆಲ್ಲವೂ ನನಗೆ ಮಹೋತ್ಪಾತಗಳಾಗಿ ಕಾಣುತ್ತಿವೆ, ಇದುವರೆಗೂ ಈ ಪ್ರಾನ್ನದಲ್ಲಿ ಬೇಟೆಯಾಡಬನ್ದ ಮಾನವರ ಸಮಾಚಾರವನ್ನೇ ನಾವು ಕೇಳಿದುದಿಲ್ಲ ; ಆದುದರಿಂದ, ನಾವು ಅವರನ್ನು ಕೇವಲ ಸಾಮಾನ್ಯರಾದ ಬೇಟೆಗಾರ ರೆಂದು ಭಾವಿಸಲಾಗದು. ಭೈ ರವಾನನ್ದ:-ಹಾಗಾದರೆ, ನೀನು ಈಕ್ಷಣವೇ ಬೇಕಾ ದಷ್ಟು ಸೈನ್ಯವನ್ನು ತೆಗೆದುಕೊಂಡು ಹೋಗಿ ಆ ಬೇಟೆಗಾರರನ್ನೆ ಜ್ಞಾ ಹಿಂಗಟ್ಟು ಮರಿಗಟ್ಟಿಸಿ ಎಳಸಿಕೊಂಡು ಬಾ. ಸೇನಾನಾಯಕ:-ಅಪ್ಪಣೆಯನ್ನಾಗಲಿ' ಎನ್ನು ಹಿಂದಿರುಗಿದನು. ಆಗ ಒಮ್ಮಿನೊ ಮ್ಮೆ ಭೋರೆಮ್ಮ ಶಬ್ದವು ಕೇಳಬಸ್ಥಿತು. ಅದನ್ನು ಕೇಳಿ ಭೈರವಾನನ್ದನು ಬೆಕ್ಕಸಪಟ್ಟು ಗವಾಕ್ಷಿಯಿಂದ ಸುತ್ತ ಮುತ್ತಲೂ ನೋಡಿದನು. ಎತ್ತ ನೋಡಿದರೂ ಪರ್ವಕಾಲದ ಸಮುದ್ರದ ತರಂಗಗಳನ್ನೇ ಒನ್ದರ ಮೇಲೊನ್ನು ಒತ್ತಿ ಬರುತ್ತಿದ್ದ ಸೈನಿಕರ ಒರೆಗಳ ಚದಕರವಾ ಳಗಳು ಸರ್ವಸಾಕ್ಷಿಯ ಅರುಣಕಿರಣ ಸಂಪರ್ಕದಿಂದ ಥಳಥಳಿ ಸುತ್ತಿದ್ದುವು, ಸವಾರರ ಕುದುರೆಗಳ ಹೇಷೆಯು ರಣಭೇರಿಯ ನಿನಾದ ದೊನ್ದಿಗೆ ಕಲೆತು ಸಿಡಿಲಬ್ಬಣೆಯ ಎದೆಯನ್ನು ಕದಲಿಸುತ್ತಿದ್ದಿತು. ಆಗ ಭೈರವಾನನ್ದನು ಕೋಪೋದ್ದೀಪಿತನಾಗಿ ತನ್ನ ಖಡ್ಗವನ್ನು ಕೈಗೆ ತೆಗೆದುಕೊಂಡು ಚನ್ನ ಶಾಲೆಯಿಂದಿಳಿದನು. ಆ ಸಮಯಕ್ಕೆ ಸೇನಾನಾಯಕನು ತತ್ತರಿಸುತ್ತ ಓಡಿಬನ್ನು, <ಒಡೆಯನೇ, ನಮ್ಮ ದುರ್ಗವು ಮುತ್ತಿಗೆ ಹಾಕಲ್ಪಟ್ಟಿದೆ ; ಹೊರಗೆ ಹೋಗುವುದಕ್ಕೆ ಅವಕಾಶವಿಲ್ಲ.” ಎನ್ದನು.