ಪುಟ:ಜಗನ್ಮೋಹಿನಿ .djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಜಗನ್ನೋಹಿನಿ. MM•••••••

      • * * * * * * * *

• • • • • ••••MMMM

  • * **

ಆಲಿಸಿ ಎನದೆಂದು ಅತ್ತಿತ್ತ ನೋಡುವಷ್ಟರಲ್ಲಿಯೇ ದೂತನೊಬ್ಬ ನು ಓಡಿಬಂದು, “ಒಡೆಯನೇ ಅಲ್ಲಿ ಯಾರೋ ಒಬ್ಬ ಹೆಂಗಸು ಅಗ್ನಿ ಪ್ರವೇಶವನ್ನು ಮಾಡಿಬಿಟ್ಟಳು. ಎಂದು ಹೇಳಿದನು. ಅದನ್ನು ಕೇಳಿದ ಕೂಡಲೇ ಆ ವೀರಾಗ್ರಣಿಯು ಅಲ್ಲಿಗೆ ಪಾದಚಾರಿಯಾ ಗಿಯೇ ಓಡಿದನು, ಅಲ್ಲಿ ಯಾರೋ ಒಬ್ಬ ಯುವತಿಯು ಕೆಂಡದ ರಾಶಿಯಲ್ಲಿ ಕಾಂಚನದ ಪಾಂಚಾಲಿಕೆಯನ್ನೇ ಪ್ರಜ್ವಲಿಸುತ್ತಿದ್ದಳು. ಆಕೆಯನ್ನು ನೋಡಿದ ಕೂಡಲೇ ಆ ಜಯಶಾಲಿಯು, (ಹಾ ! ಅಕಟಕಟಾ ! ಕೆಟ್ಟೆನು, ಕೆಟ್ಟೆನು !?” ಎಂದು ಮೂರ್ಛಿತನಾಗಿ ದಪ್ಪನೆ ದಂಡದಂತೆ ನೆಲಕ್ಕೆ ಬಿದ್ದನು. ಆಗ ಅಲ್ಲಿದ್ದ ದಳಪತಿಗಳೆಲ್ಲಾ ಕಳವಳಗೊಂಡು ತಮ್ಮ ಕೈ ತೋಪಚಾರಗಳಿಂದ ಆತನನ್ನು ಎಚ್ಚರಗೊಳಿಸಿ ಸಂತವಿಸಲು, ಆತ ನು ಆ ಸೇನಾವತಿಗಳನ್ನು ಕುರಿತು, (ಎಲೈ ಸ್ನೇಹಿತರೇ, ನಮ್ಮ ಸರ್ವಸಾಹಸವೂ ನೀರಿನಲ್ಲಿ ಮಾಡಿದ ಹೋಮದಂತಾಯಿತು, ಈ ಸಾಧಿಯೇ ನನ್ನ ಮೋಹಿನಿಯು ! ಈಕೆಯೇ ನನ್ನ ದೇವದತ್ತಳಾದ ದೇವಿಯು ! ಈ ತಪಸ್ವಿನಿಯ ಇಂತಹ ಅಪಮೃತ್ಯುವಿಗೆ ನಾನೇ ಕಾರಣ ; ಇಂತಹ ಹೆಂಗೊಲೆಗೆ ಕಾರಣಭೂತನಾದ ನನ್ನ ಮನಕೆ ಈ ಭೂತಳದಲ್ಲಿ ಶಾಂತತೆಯು ದುರ್ಲಭ, ಆದುದರಿಂದ ನಾನೂ ಈ ಯೋಗೀಶಕುಮಾರಿಯೊಂದಿಗೆ ಅಗ್ನಿ ಪ್ರವೇಶವನ್ನು ಮಾಡಿ ಪರ ಲೋಕದಲ್ಲಿಯಾದರೂ ಆಕೆ ಯ ಪಾಣಿಗ್ರಹಣವನ್ನು ಮಾಡಿ ಮ ಹಾನುಭಾವರಾದ ಋಷಿಗಳ ಆಜ್ಞೆಯನ್ನು ನೆರವೇರಿಸುವೆನು " ಎಂದು ಅಗ್ನಿ ಪ್ರವೇಶಮಾಡುವುದಕ್ಕೆ ಸನ್ನದ್ಧನಾದನು, ಆ ವೇಳೆಗೆ