ಪುಟ:ಜಗನ್ಮೋಹಿನಿ .djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೪ ಜಗನ್ನೋಹಿನಿ. , € / .• ' •~ ಅನಂತ್ ಜ ಸಲಿಲ್ಲ ” ಎಂದು ತಮ್ಮ ಕಮಂಡಲೋದಕವನ್ನು ಅಭಿಮಂತ್ರಿಸಿ ಪ್ರಜ್ವಲಿಸುತ್ತಿದ್ದ ಆ ಅಗ್ನಿ ಯ ರಾಶಿಯಮೇಲೆ ಪ್ರೋಕ್ಷಿಸಿದರು. ತಣವೇ ಆ ಕನ್ನಿಕೆಯು ನಿದ್ರೆಹೋಗಿ ಎದ್ದವಳ ಹಾಗೆ ಎದ್ದು ಈಚಿಗೆ ಬಂದು ಅಲ್ಲಿ ನಿಂತಿದ್ದ ಗುರು ಹಿರಿಯರಿಗೆ ಅಭಿನಂದಿಸಿ ಲಜ್ಞಾ ಭರದಿಂದ ತಲೆಬಾಗಿ ನಿಂತಳು. ಆಗ ಕುಶನಾಭರು ಆ ಅನು ರೂಪರಾದ ವಧೂವರರನ್ನು ನೋಡಿ, ಎಲೆ, ನಾಳೆ ಸಿಂಹ ಲಗ್ನ ದಲ್ಲಿ ನಿಮ್ಮಗಳ ಪ್ರಾಣಿಗ್ರಹಣ ಮಹೋತ್ಸವವನ್ನು ನೆರವೇರಿಸಬೇ ಕಂದು ಗುರುಗಳು ಸಂಕಲ್ಪ ಮಾಡಿರುವರು; ಆದ ಪ್ರಯುಕ್ತ ನೀವು ಗಳು ನಿಮ್ಮ ನಿಮ್ಮ ಸಕಲ ಪರಿವಾರ ಸಮೇತರಾಗಿ ಪದ್ಮ ದ್ವೀಪ ಕೈ ಈಗಲೇ ಹೋಗಿ ಅಲ್ಲಿ ರಾಜಪುರೋಹಿತರ ಅನುಜ್ಞೆಯನ್ನೇ ವಿವಾ ಹಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನೂ ಸಿದ್ಧ ಪಡಿಸಿಕೊಂಡಿರಿ, ನಾವೂ ನಮ್ಮ ಆಕ್ಷಿ ಕವನ್ನು ತೀರಿಸಿಕೊಂಡು ಅಲ್ಲಿಗೆ ಬರುವವು.' ಎಂದು ಎಲ್ಲರೂ ಅನ್ತರ್ಧಾನವನ್ನು ಹೊಂದಿದರು. ತರುವಾಯ ಜಗನ್ನೋಹಿನಿಯು ಅಲ್ಲಿ ಅಣಿಯಾಗಿದ್ದ ಪಾಲು ಕಿಯಲ್ಲಿ ಕುಳಿತುಕೊಂಡು ರೇವಿನ ಕಡೆಗೆ ತೆರಳಿದಳು, ಆಕೆಯ ಹಿಂದುಗಡೆಯೇ ಅಲ್ಲಿಗೆ ಬಂದಿದ್ದ ಆಕೆಯ ಪರಿವಾರವೆಲ್ಲವೂ ತಮ್ಮ ತಮ್ಮ ಅ೦ತಸ್ತಿಗೆ ಯೋಗ್ಯವಾದ ವಾಹನದಲ್ಲಿ ಕುಳಿತುಕೊಂಡು ಹೊರಟರು, ಆದಿತ್ಯವರ್ಮನು ತನ್ನ ಸೇನಾನಾಯಕರಿಂದ ಪರಿವೃತ ನಾಗಿ ಪದ್ಮದ್ವೀಪಕ್ಕೆ ಪ್ರಯಾಣಮಾಡಿದನು. ಹಿಂದೆಯೇ ಉಭಯ ಪಕ್ಷದ ಸೇನೆಯ ಸಂಭ್ರಮದಿಂದ ಬೆರತು ಜಯಧ್ವನಿಯನ್ನು ಮಾ ಡುತ್ತಾ ಆತನನ್ನು ಹಿಂಬಾಲಿಸಿದರು, ಎಲ್ಲರೂ ಸಮುದ್ರವನ್ನು ದಾಟಿ ಮೂರನೆಯ ಜಾವಕ್ಕೆ ಪದ್ಮದ್ವೀಪವನ್ನು ಸೇರಿದರು. ಆ ನಗ