ಪುಟ:ಜಗನ್ಮೋಹಿನಿ .djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಣಿಗ್ರಹಣ. ೨೦೫

  1. = – - – - – 2 ಗೆ
  • *y

ರದ ವೈಭವವನ್ನು ನೋಡಿ ಆದಿತ್ಯವರ್ಮನ ಕಡೆಯವರೆಲ್ಲರೂ ಧರ್ಮ ರಾಯನ ರಾಜಸೂಯ ಯಾಗಶಾಲೆಯನ್ನು ಪ್ರವೇಶಿಸಿದ ದುರೊ ಧನಾದಿಗಳ ಅವಸ್ಥೆಯನ್ನು ಹೊಂದಿದರು. ಭವಿಷದ್ದೂ ಪತಿ ಯಾದ ಆದಿತ್ಯವರ್ಮನು ರಾಜಕೀಯವಾದ ನೌಕೆಯಿಂದ ಪದ್ಮದ್ವೀ ಪದ ಮೇಲೆ ಇಳಿದ ಕೂಡಲೇ ಅಲ್ಲಿಯ ಅಮಾತ್ಯರೆಲ್ಲರೂ ಪ್ರ ಮುಖ ಾದ ಪುರಜನರಿಂದೊಡಗೂಡಿ ಆತನನ್ನು ರಾಜಮರ್ಯಾ ದೆಗಳಿ೦ದ ಮಂಗಳವಾದ್ಯ ಪುರಸ್ಕೃರವಾಗಿ ಕರೆದುಕೊಂಡು ಹೋಗಿ ಅರಮನೆಯಲ್ಲಿಯೇ ಇಳಿಸಿದರು, ಅಷ್ಟುಹೊತ್ತಿಗಾಗಲೇ ಅರ ಮನೆಯ ಬಡಗಿಗಳು ಕಲ್ಯಾಣಮಂಟಪವನ್ನು ನಿರ್ಮಾಣಮಾಡುವು ದಕ್ಕೆ ಉಪಕ್ರಮಿಸಿದ್ದರು, ಪುರಜನರೆಲ್ಲರೂ ಆನಂದಪರವಶರಾಗಿ ತಮ್ಮ ತಮ್ಮ ಮನೆಗಳನ್ನೂ ರಾಜಮಾರ್ಗಗಳನ್ನೂ ತಳಿರು ರಣ ಗಳು, ಕದಳೀ ಸ್ತಂಭಗಳು, ಚಿತ್ರ ಪತಾಕೆಗಳು, ಇವೇ ಮುಂತಾದು ವಗಳಿಂದ ಅಲಂಕರಿಸುತ್ತಿದ್ದರು. ಆ ಮಹಾಯೋಗಿಗಳ ತಪಃ ಪ್ರಭಾವದಿಂದ ಸಕಲಾಲಂಕಾ ರಯುಕ್ತವಾಗಿಯೇ ನಿರ್ಮಿತವಾಗಿದ್ದ ಪಟ್ಟಣಕ್ಕೆ ಅಲಂಕಾರ ಮಾ ಡುವುದು ಪ್ರಫುಲ್ಲ ವಾದ ಕೆಂದಾವರೆಗೆ ಬಣ್ಣ ಹಾಕುವ ಹಾಗಿದ್ದಿ ತು, ಆದಿನ ಆ ವಿಧವಾದ ಮಂಗಳಾಲ೦ಕಾರದಲ್ಲಿ ಆಸಕ್ತರಾಗಿದ್ದ ಆ ಪುರಜನರಿಗೆ ಆ ರಾತ್ರಿಯು ಕಳೆದು ಹೋದುದು ಗೊತ್ತೇ ಆಗಲಿಲ್ಲ. ಅರುಣೋದಯ ಕಾಲಕ್ಕೆ ಮುಂಚಿತವಾಗಿಯೇ ವಿವಾಹಮ ಹೋತ್ಸವಕ್ಕೆ ಬೇಕಾದ ಸಮಸ್ತ ಸಮ್ಯಾರಗಳೂ ಸಿದ್ಧವಾದುವು. ಮಂಗಳವಾದ್ಯಗಾರರು ಹೃದಯಂಗಮವಾದ ಉದಯರಾಗವನ್ನು ಪಾಡತೊಡಗಿದರು. ಆ ವೇಳೆಗೆ ಆದಿತ್ಯನು ತನ್ನ ಅರುಣಕಿರಣಗಳ