ಪುಟ:ಜಗನ್ಮೋಹಿನಿ .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೋಹಿನೀ - ಬಹು ಸುಂದರವಾಗಿರುತ್ತಿದಿತು ; ಈತನು ಆಗಿನ ಕಾಲದ ರಾಜ ಕುಮಾರರಂತೆ ತಲೆಗೆ ಮುಂಡಾಸನ್ನು ಕಟ್ಟಿ ಕೊಂಡಿದ್ದನು ; ಮೈಗೆ ಕೆಂಪು ನಿಲುವಂಗಿಯನ್ನು ಹಾಕಿಕೊಂಡಿದ್ದನು ; ನಡುಕಟ್ಟಿಗೆ ನಿಡುವಾದ ಕತ್ತಿಯನ್ನು ಕಟ್ಟಿ ಕೊಂಡಿದ್ದನು. - ಆ ಕಟ್ಟೆಯ ಕೆಳಗಡೆ ಹನ್ನೆರಡು ಜನಕಾಲಾಳುಗಳು ಆಯುಧ ವಾಣಿಗಳಾಗಿ ಅಪ್ಪಣೆಯನ್ನು ನಿರೀಕ್ಷಿಸಿಕೊಂಡು ನಿಂತಿದ್ದರು. ಆ ಸಮಾಜವನ್ನು ನೋಡಿದ ಕೂಡಲೆ ಎಂತಹ ಮಡೆನಾಯದರೂ, ಆ ಗಾದಿಯ ಮೇಲೆ ಕೂತಿದ್ದ ಮಹಾವ್ಯಕ್ತಿಯೇ ಅಲ್ಲಿದ್ದ ಜನಗಳಿ ಗೊಡೆಯನೆಂದು ದೃಢವಾಗಿ ಹೇಳುತ್ತಿದ ನು. ಬೈರಾಗಿಯ, ಆ ಪ್ರಮುಖನಿಗೆ ಅಭಿಮುಖವಾಗಿ ಹೋಗಿ ನಿಂತನು. ಆತನು ಇವನನ್ನು ನೋಡಿದ ಕೂಡಲೆ ಹಸನ್ಮುಖಿ ಯಾಗಿ ಏನು ಗುರುಗಳೇ, ಚೆನ್ನಾಗಿದ್ದೀರಾ ? ಯಾವ ಸವಾ ಚಾರವನ್ನು ತಂದಿರುವಿರಿ ? ಜಾಗ್ರತೆಯಾಗಿ ಅಶೃಣೆಯಾಗಲಿ ” ಎಂದು ದೊಡ್ಡವರು ಕೆಲವು ನೇತ್ರ ಚಿಕ್ಕವರನ್ನು ಪ್ರೀತಿಯಿಂದ ಲೂ ಸಲಿಗೆಯಿಂದಲೂ ಬಹುವಚನದಲ್ಲಿ ಮಾತನಾಡಿಸುವ ರೀತಿಯ ಧನಿಯಿಂದ ಕೇಳಿದರು. ಬೈರಾಗಿ: - ಒಡೆಯನಿಗೆ ತಿಳಿಯದ ವರ್ತಮಾನವಿರುವುದೆ ? ಪ್ರಮುಖ:- ಓಹೋ ! ನಿನ್ನ ಮುಖವನ್ನು ನೋಡಿದರೆ ನೀನೀಗ ಆ ರವಿವರ್ಮನಿಗೆ ಸರಿಯಾದ ದಾರಿಯನ್ನು ಹೇಳಿ ಬಂದಿ ರುವಹಾಗೆ ಕಾಣುತ್ತದೆ. ಬೈರಾಗಿ--ಅಹುದು. ಪ್ರಮುಖ-ಎದ್ದು ಕುಳಿತು ( ಎಲೈ , ನೀನು ಮೊನ್ನೆ ಬಂದಿ ದ್ದಾಗ ನಮ್ಮೊಡನೆ ಹೇಳಿದ ಸಮಾಚಾರವೆಲ್ಲಾ ಯಥಾರ್ಥವಾದು ದೆಂಬ ವಿಷಯದಲ್ಲಿ ನಿನಗೆ ಚೆನ್ನಾಗಿ ನ೦ಬು ಗೆಯುಂಟೇ ?