ಪುಟ:ಜಗನ್ಮೋಹಿನಿ .djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

++ + - – - – - ೧೨ ಜಗನ್ನೊಹಿನೀ ಕಡೆಗೆ ತನ್ನ ಕುದುರೆಯನ್ನು ಬಿಟ್ಟನು. ಕೂಡಲೇ ಉಳಿದ ಸವಾರರೆಲ್ಲರೂ ಅದೇ ರೀತಿಯಾಗಿ ಅಲ್ಲಲ್ಲಿ ಮರೆಯಾದರು. ಅವರೆಲ್ಲರೂ ಅಡಗಿಕೊಳ್ಳುವ ಸಡಗರದಲ್ಲಿರುವಾಗಲೇ ಶಾಜಪುತ್ರ ಸ್ಥಾನದ ಕಡೆಯಿಂದ ಮಾರ್ಗ ದಲ್ಲಿ ಬರುತ್ತಿದ್ದ ಕುದುರೆ ಗಳ ಖುರಪುಟದ ಶಬ್ದ ವು ಕೇಳಬಂದಿತು, ಆರದೆಂದು ಅತ್ತಿತ್ತ ನೋಡುವಷ್ಟರೊಳಗಾಗಿ ಮೂರು ಮಂದಿ ಸವಾರರು ದೃಷ್ಟಿ ಗೋಚರರಾದರ), ಇವರೆಲ್ಲರೂ ಬಹು ತೇಜಸಿಗಳಾದ ರಾಜಪುತರಂತೆ ಕಾಣುತಿದ್ದರು. ನೋಡುತಿದ್ದ ಹಾಗೆಯೇ ಅವರು ಸವಿಾಪಕ್ಕೆ ಬಂದರು. ಅವರಲ್ಲೊಬ್ಬನು ಮುಂದಾಗಿ ಬರುತ್ತಿದ್ದನು. ಈತನ ಎರಡು ಪಕ್ಕಗಳಲ್ಲಿ ಯ “ಇಬ್ಬರು ಸವಾರರು, ಮುಂದ ರಿದು ಹೋಗುತ್ತಿದ್ದ ತಮ್ಮ ಕುದುರೆಗಳ ಕಡಿ ವಾಣವನ್ನು ಬಲ ವಾಗಿ ಎರಡು ಕೈಗಳಿಂದಲೂ ಎಳೆಯುತ್ತಾ ಪ್ರಯತ್ನ ಪೂರ್ವಕ ವಾಗಿ ಕೊಂಚ ಹಿಂದಾಗಿಯೇ ಬರುತ್ತಿದ್ದರು, ಮುಂದೆ ಬರು ತಿದ್ದವನು ಆ ವೇಳೆಗೆ ಉದಯಾದ್ರಿಯ ಶಿಖರದಮೇಲೆ ಕನಕ ಕಲಶದಂತೆ ಕಳಿಸುತ್ತಿದ್ದ ದಿನಮಣಿಯ ಮಂಡಲವನ್ನು ತನ್ನ ಜತೆಗಾರರಿಗೆ ಬೆರಳಿನಿಂದ ತೋರಿ ಮಂದಹಾಸದಿಂದ ಏನನ್ನೂ ಹೇಳುತ್ತಿದ್ದ ನು. - ಇವರನ್ನು ನೋಡಿದ ಕೂಡಲೆ ಅಲ್ಲಿ ಪೊದೆಗಳಲ್ಲಿ ಹೊಂಚು ಕಾಯುತ್ತಿದ್ದ ಆ ರಾವುತರ ಅಧಿಪತಿಯು ಬಾಯಿಂದ ಒಂದು ವಿಧವಾದ ಧ್ವನಿಯನ್ನು ಮಾಡಿದನು. ಉತ್ತರ ಕ್ಷಣ ದಲ್ಲಿ ಯೇ ಅವರೆಲ್ಲರೂ ಏಕಕಾಲದಲ್ಲಿ ಹೊರಹೊರಟು ಆ ರಾಜ ಪುತ್ರರನ್ನು ಮುತ್ತಿ ಅವರ ಕುದುರೆಗಳ ಕಾಲುಗಳನ್ನು ಕತ್ತರಿಸಿ ಕೆಡಹಿದರು, ಆ ಕುದುರೆಗಳೊಂದಿಗೆ ಕೆಳಕ್ಕೆ ಬಿದ್ದ ರಾಜಪುತರು