ಪುಟ:ಜಗನ್ಮೋಹಿನಿ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುಷ್ಟಸಂಹಾರ ೧೬

  • * * * * * * * * * * * * *

ವೀರ: -'ನಮ್ಮ ಮೇಲೆ ಬಿದ್ದ ಆ ಸವಾರರು, ಆ ಪ್ರಸಿ ದ್ದ ನಾದ ಪಾಳೆಯಗಾರನ ಕಡೆಯವರಾಗಿದ್ದರೆ, ನಾವು ಅವರನ್ನು ಕೊಂದುದು ಹೆಚ್ಚೇನಿನ ಗೂಡಿಗೆ ಕಲ್ಲು ಹೊಡೆದಂತೆ ಆಗಿದೆ. ಅದು ಹೇಗಾದರೂ ಇರಲಿ, ಆ ಕಳ್ಳ ಸವಾರರು ಸಂಹೃತರಾದ ರೆಂದು ನಾವು ಉದಾಸೀನರಾಗಿರಕೂಡದು ” ಎಂದು ತನ್ನ ಕುದುರೆಯನ್ನು ಹಿಮ್ಮಡಿ ಮುಳ್ಳುಗಳಿಂದ ಚುಚ್ಚಿ ವೇಗವಾಗಿ ಮುಂದಕ್ಕೆ ಬಿಟ್ಟನು. ಆ ವೇಳೆಗೆ ಅರವಿಂದ ಬಾಂಧವನು ಔತುಕದಿಂದ ಗಗನಮಂಡಲಕ್ಕೆ ಏರಿ ಆ ಜಯಶಾಲಿಯಾದ ನಮ್ಮ ಮಾರ್ಗಸ್ಥನ ಮುಖದ ಮೇಲೆ ಸಾಲಿಡುತ್ತಿದ್ದ ಶ್ರ ಮಾಂಬುಕಣಗಳನ್ನು ತನ್ನ ಕರಗಳಿಂದ ಒರೆಸುತ್ತಿದ್ದನು ಆ ಯುವಕನನ್ನು ಕಣ್ಣಾರ ನೋಡುವುದಕ್ಕೆ ಇದುವೇ ಸಮಯ. - ಅವನು, ಸುಮಾರು ಇಪ್ಪತ್ತು ವರ್ಷ ವಯಸ್ಸುಳ್ಳವನಾಗಿ ದೈನು ; ಆಕಾರದಲ್ಲಿ ಆಜಾನುಬಾಹುವಾಗಿಯ ದೃಢಾಂಗ ನಾಗಿಯೂ ಇದ್ದನು, ಪ್ರಫುಲ್ಲ ವಾದ ಅವನ ಮುಖವು ರಾಕಾ ಚಂದ್ರ ಬಿಂಬದಂತೆ ಮನೋಜ್ಞವಾಗಿದ್ದಿ ತು; ಕಣ್ಣುಗಳು ಕಮಲ ದಳಗಳಂತೆ ಕರ್ಣಾ೦ತ ವಿಶ್ರಾಂತವಾಗಿದ್ದುವು. ವಿಶಾಲವಾದ ಉನ್ನತವಾದ ಅವನ ಲಲಾಟದಲ್ಲಿ ಜಯಲಕ್ಷ್ಮಿಯು ಸುವ್ಯಕ್ಕೆ ಳಾಗಿದ್ದಳು , ಅವನ ಮಧುರವಾದ ವಾಣಿಯು ಅವನ ವಿದ್ಯೆ ಯನ್ನೂ ವಿನಯವನ್ನೂ ಗಾಂಭೀರ್ಯವನ್ನೂ ಔದಾರ್ಯವನ್ನೂ ಮಹತ್ವವನ್ನೂ ವ್ಯಕ್ತ ಪಡಿಸುತ್ತಿದ್ದಿತು.