ಪುಟ:ಜಗನ್ಮೋಹಿನಿ .djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಜಗನ್ನಿಹಿನೀ ಮೂರನೆಯ ಪ್ರಕರಣ 89 ದೈವಸಹಾಯ. ನಡು ಬೇಸಿಗೆ ; ಎಳೆ ಬಿಸಿಲಿನ ಬೇಗೆಯನ್ನು ಕೂಡಾ ಸೈರಿಸುವುದಕ್ಕಾ ಗದು ; ನೋಡುತ್ತಿದ್ದ ಹಾಗೆಯೇ ಬಿಸಿಲು ಬಲು ತೀವ್ರವಾಗಿ ಏರುತ್ತಿದ್ದಿತು; ಮೃಗಗಳೂ ಪಕ್ಷಿಗಳೂ ನಳಲನ್ನೂ ನೀರನ್ನೂ ಹುಡುಕಿಕೊಂಡು ಅಂಡಲೆಯುತ್ತಿದ್ದು ವು ; ನೆಲವು ಕಾದು ಕಾದಕಾವಲಿಯಂತಾಗಿದ್ದಿ ತು ; ಆ ವೇಳೆಯಲ್ಲಿ ಕಾಲು ನಡೆಯಾಗಿ ಪಯಣಮಾಡುವ ದಾರಿಗರ ಪಾಡು ಬಣ್ಣಿಸಲಸದಳ ವಾದುದು. ನಮ್ಮ ಸವಾರರ ಕುದುರೆಗಳು ಓಡಿಓಡಿ ದಣಿದು ಕಾಲು ಸೋತು ಬೆವರು ಸುರಿಸುತ್ತಾ ಬೆಂಡಾಗಿ ತಲ್ಲಣಿಸುತ್ತಿದ್ದುವು. ಸವಾರರು ಕಷ್ಟ ಸಹಿಷ್ಣುಗಳಾಗಿಯ ಪರಾಕ ಮಿಗ ಳಾಗಿಯೂ ಇದ್ದಾಗ್ಯೂ ಆ ಬಿಸಿಲಿನ ತಾಪವನ್ನು ತಡೆಯಲಾರದೇ ಬಾಯಾರಿ ಬಳಲಿದರು ; ಎಲ್ಲಾ ದರೂ ನೀರು ನೆಳಲು ಸಿಕ್ಕಿದರೆ ದಣಿವಾರಿಸಿಕೊಳ್ಳುವ ಎಂದು ಅತ್ತಿತ್ತ ನೋಡುತ್ತಿದ್ದರು. ಆ ದಾರಿಯಲ್ಲಿ ಎಲ್ಲಿ ಯ ಕೆರೆ ಕುಂಟೆಗಳು ಹಳ್ಳಿ ಹಳ್ಳಿಗಳು ಮನೆ ಮಠಗಳು ಯಾವುವೂ ಇರಲಿಲ್ಲ ; ಹಾಗೂ ಹೀಗೂ ಮರು ಜಾವದ ಹೊತ್ತಿಗೆ ಮರು ದಾರಿಗಳು ಸೇರುವೆಡೆಗೆ ಹೋಗಿ ಸೇರಿದರು, ಆ ದಾರಿಗಳಲ್ಲಿ ಮಹೋದಯಕ್ಕೆ ಹೋಗುವಮಾರ್ಗ ವಾವುದೋ ಅವರಿಗೆ ಗೊತ್ತಾಗಲಿಲ್ಲ, ಯಾರನ್ನಾದರೂ ವಿಚಾ ರಿಸುವ ಎಂದರೆ, ಆ ದಾರಿಯಲ್ಲಿ ಯಾರೂ ಅಡ್ಡ ಸುಳಿಯಲಿಲ್ಲ - '