ಪುಟ:ಜಗನ್ಮೋಹಿನಿ .djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ ೧೯ 5 'ದೈವಯೋಗದಿಂದ ಯಾರಾದರೂ ದಾರಿಗರು ಕಣ್ಣಿಗೆ ಬಿದ್ದರೆ ಅವರನ್ನು ವಿಚಾರಿಸುವ' ಎಂದುಕೊಂಡು ಆ ಮವರೂ ಅಲ್ಲಿಯೇ ನಾಲ್ಕು ಕಡೆಯೂ ನೋಡುತ್ತ ನಿಂತರು. ಆಗ ಎಲ್ಲಿಂದಲೋ “ ಗಣ, ಗಣ ಎಂಬ ಶಬ್ದವು ಕೇಳಬಂದಿತು. ಏನದೆಂದು ಅತ್ತಿತ್ತ ನೋಡುವಷ್ಟರಲ್ಲಿಯೇ ಇದಿರಿಗೆ ಬಹು ದೂರದಲ್ಲಿ ಒಂದು ಅಪೂರ್ವವಾದ ಮನುಷ್ಯನ ಆಕಾರವು ಅತ್ತಲೇ ಬರುತ್ತಿದ್ದಂತೆ ಕಾಣಿಸಿತು. ಈ ಕೂಡಲೇ ಅವರು ತವಕದಿಂದ ಅದನ್ನು ಎದುರ್ಗೊಳು ವುದಕ್ಕೆ ಹೋದರು, ಆ ಆಕಾರವು ಒಬ್ಬ ಮನುಷ್ಯನದಾಗಿದ್ದಿ ತು. ಅವನಿಗೆ ವಯಸ್ಸು ಎಪ್ಪತ್ತೈದು ವರುಷದಮೇಲಾಗಿದ್ದಿ ತು. ಅವನು ಬಲಕೈಯಲ್ಲಿ ಊರುಗೋಲನ್ನೂ ಎಡಗೈಯಲ್ಲಿ ಕಚ್ಚಿ ಣದ ದೀಪದ ಕಂಬವನ್ನೂ ಹಿಡಿದುಕೊಂಡಿದ್ದ ನು; ಎದೆಗೆ ಹಿತ್ತ ಳೆಯ ಆಂಜನೇಯನ ಪ್ರತಿಮೆಯನ್ನು ಹಾಕಿಕೊಂಡಿದ್ದನು. ಕಂಬದ ಮೇಲೂ ಆಂಜನೇಯನ ಮೇಲೂ ಬಾಡಿದ ದಾಸವಾಳದ ಹೂವಿನ ಸರಗಳು ಜೋಲಾಡುತ್ತಿದ್ದುವು ; ಒಂದು ನವಾರಿನ ಪಟ್ಟೆ ಯ ಒಂದು ಕೊನೆಗೆ ಒಂದು ದೊಡ್ಡ ಸಂಕವನ್ನೂ ಜಾಗಟೆ ಗಂಟೆಗಳನ್ನು ಮತ್ತೊಂದು ಕೊನೆಗೂ ಕಟ್ಟಿ ಎಡ ಹೆಗಲಮೇಲೆ ಸಂಕು ಮುಂದೆ ಕಾಣುವಂತೆ ಹಾಕಿಕೊಂಡಿದ್ದನು ; ತಲೆಗೆ ಅರ ಶಿನ ಬಣ್ಣದ ಗಾತ್ರವಾದ ರುಮಾಲನ್ನು ಕಟ್ಟಿ ಕೊಂಡಿದ್ದನು ; ಕೊಳೆ ಪಂಚೆಯನ್ನು ೬ು ಸೊಂಟಕ್ಕೆ ಒಂದು ಗಂಗಾವಿ ಬೈರವಾಸ ನನ್ನು ಸುತ್ತಿಕೊಂಡಿದ್ದನು ; ಬಲಗಡೆಯ ಮುಂಗಾಲಿಗೆ ಕರಿಯ ಬಟ್ಟೆಯನ್ನು ಕಟ್ಟಿ ಕೊಂಡಿದ್ದನು. ಇದರ ಮೇಲೆ ನೊಣಗಳು ಮುತಿ ಕೊಂಡಿದ್ದು ವು. ಇವನು ಸೊಂಟ ಬಗ್ಗಿಸಿಕೊಂಡು