ಪುಟ:ಜಗನ್ಮೋಹಿನಿ .djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••••••vvvvvvvvvv ** ** ೧””* * vwwwy ೨೦ ಜಗನ್ನೊ ಹಿನೀ ಕುಂಟುತ್ತಾ ಕೋಲೂರಿಕೊಂಡು ನಡೆವಾಗ ಹಿಂದುಗಡೆ ಗಂಟೆಯು ಅಲ್ಲಾಡುತ್ತಿದ್ದಿತು. ವೀರನು ಅವನ ವಾರ್ಧಿಕತೆಯನ್ನು ನೋಡಿ ಮನ ಮರುಗಿ ಮರ್ಯಾದೆಯಿಂದ “ಅಜ್ಞಾ ! ಮಹೋದಯಕೆ ಹೋಗುವ ದಾರಿ ಊಾವುದು ? ಕರುಣಿಸಿ ಹೇಳುವಿಯಾ ? !' ಎಂದು ಕೇಳಿದನು, ಅದಕ್ಕೆ ಆ ಮುದುಕನು ಮರುಮಾತಾಡದೆ ತಲೆಯೆತ್ತಿ ಕೂಡ ನೋಡದೆಯೆ ಮುಂದಕ್ಕೆ ಸಾಗುತ್ತಿದ್ದನು. ಆಗ ವೀರನು ತಟ್ಟನೆ ಕುದುರೆಯಿಂದಿಳಿದು ಕಡಿವಾಳವನ್ನು ಕೈಯಲ್ಲಿ ಹಿಡಿದುಕೊಂಡು ಆ ಮುದುಕನ ಇದಿರಿಗೆ ಹೋಗಿ ನಿಂತು “ಅಯ್ಯಾ ! ಅದೇಕೆ ಮಾತನಾಡದೆ ಹೋಗುತ್ತಿರುವೆ? ಕೊಂಚ ನಿಲ್ಲು,” ಎನಲು ಮುದುಕನು ವೀ ಆನನ್ನೂ ಅವನ ಜತೆಗಾರರನ್ನೂ ದೊಡ್ಡದಾಗಿ ಕಣ್ಣು ಬಿಟ್ಟು ನೋಡಿ ಬೆಚ್ಚಿ, ಬೆದರಿ, ನಡುನಡುಗುತ್ತಾ ಗದ್ದದ ಸ್ವರದಿಂದ “ ಮಾರಾಯ! ತಾಳು ತಾಳು! ನಿನ್ನ ಕಾಲಿಗೆ ಬೀಳುತ್ತೇನೆ; ನನ್ನ ತಲೆ ಕಡಿಯ ಬೇಡ; ನನ್ನ ಹತ್ತಿರ ಇರುವುದನ್ನೆಲ್ಲಾ ಸದ್ದು ಮಾಡದೇ ನಿನ ಗೊಪ್ಪಿಸಿ ಬಿಡುತ್ತೇನೆ.” ಎಂದನು. - ವೀರ- ಅಯ್ಯೋ! ಪಾಪ ! ಈ ಬಡ ವೃದ್ದನು ನಮ್ಮನ್ನು ಕಳ್ಳರೆಂದೆಣಿಸಿ ದಿಗಿಲು ಪಡುತ್ತಿದ್ದಾನೆ, ಎಂದುಕೊಂಡು ಕನಿಕರ ದಿಂದ “ಅಯ್ಯಾ ! ಭಯ ಪಡಬೇಡ; ನಾವು ಕಳ್ಳರಲ್ಲ.' ಮುದುಕ -ಅಯ್ಯಯ್ಯೋ ! ಸತ್ಯವಾಗಿ, ಪರಶುರಾಮ ಕ್ಷೇತ್ರದಲ್ಲಿ ಬಂದ ಕಾಸುಗಳೆಲ್ಲಾ ಇದೋ ಈ ಗರುಡಕಂಬ ದಲ್ಲಿಯೇ ಇವೆ, ಅವುಗಳನ್ನೆಲ್ಲಾ ನೀನೇ ತೆಗೆದುಕೊಳ್ಳಬಹುದು. ನಮ್ಮ ಸ್ಪಾ ! ನಿನ್ನನ್ನು ಬೇಡಿಕೊಳ್ಳುತೆನೆ; ನನ್ನ ಹೊಟ್ಟೆ