ಪುಟ:ಜಗನ್ಮೋಹಿನಿ .djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ ೨೩

  • * * * * * ** - * * *
  • - -*- * * * *
  • *

••• ರದಲ್ಲಿ ನಾನಾವ ಮಹಾಪತಿವ್ರತೆಯ ಮಾನಭಂಗವನ್ನು ಮಾಡಿ ದೈನೋ? ಆವ ಸತಿಯ ಸತಿಯನ್ನು ಅಗಲಿಸಿದ್ದೆ ನೋ ? ಈಗ ನನಗಿಂತಹ ದುರವಸೆಯು ಬಂದೊದಗಿತು. ಅಕಟಕಟಾ , ಕೆಟ್ಟೆನು ಕೆಟ್ಟೆನು, ಹಾ ! ವನದೇವತೆಯೆ, ಧರ್ಮದೇವತೆಯೆ ! ಭೂಮಾತೆಯೆ ! ನನ್ನ ಮಾನವನ್ನು ಕಾಪಾಡಿ ಕಾಪಾಡಿ, ನಿಮ್ಮ ಹೊರತು ಈ ಮಹಾರಣ ದಲ್ಲಿ ಆರ್ತರಾದ ಅಬಲೆಯರನು ಕಾಪಾಡುವ ಕ್ಷತ್ರಿಯ ವೀರರಾರಿರುವರು? ಎಂದು ಯಾರೋ ಒಬ್ಬ ಹೆಂಗಸು ಗೋಳಾಡುತ್ತಿದ್ದಳು, ಈ ಮನೋ ವೇಧಕ ವಾದ ಮಾತುಗಳು, ಕೇಳಿಸಿದಕೂಡಲೇ “ ಭಯ ಪಡಬೇಡ ! ಭಯ ಪಡಬೇಡ ! ಇದೊ ಬಂದೆನು” ಎಂಬ ವಚನವು ವೀರನ ಬಾಯಿಯಿಂದ ತನ್ನಷ್ಟಕ್ಕೆ ತಾನೇ ಹೊರಟಿತು; ಕೂಡಲೇ ಅವನು ವೀರಾವೇಶದಿಂದ ಕತಿಯನ್ನು ಹಿರಿದೆತ್ತಿಕೊಂಡು ಆಯೆಡೆಗೆ ಸಿಡಗಿನಂತೆ ನುಗ್ಗಿ ದನು. ಅವನ ಜತೆಗಾರರೂ ಆಯುಧ ಪಾಣಿಗಳಾಗಿ ಅವನನ್ನು ಹಿಂಬಾಲಿಸಿ'ದರು. ಅಲ್ಲಿ ಯಾರೋ ಕಾಡುಜನರಿಬ್ಬರು ಒಬ್ಬ ಯುವತಿಯನ್ನು ಹಿಗ್ಗ ಮುಗ್ಗ ಎಳೆದಾಡುತ್ತಿದ್ದರು. ಅವರು ಈ ವೀರಮುಖ್ಯರ ಮುಖಗಳನ್ನು ನೋಡಿದ ಕೂಡಲೇ ಆ ಮಾನಿನಿಯನ್ನು ಬಿಟ್ಟು ಓಡಿಹೋದರು. ಆಗ ಆ ಹೆಂಗಸು ಓಡಿಬಂದು 'ಮಹಾನು ಭಾವನೆ ಕಾಪಾ ಡು , ಕಾಪಾಡು ಎಂದು ವೀರನ ಕಾಲಿನ ಮೇಲೆ ಬಿದ್ದಳು. ಆತನು ದಯಾಮಯ ವಾದ ದನಿಯಿಂದ ತಾಯೆ, ಏಳು ಏಳು | ಸಂತೈಸಿಕೊ, ಆಪದ್ದ ತರಾದವರನ್ನು ಕಾಪಾಡುವುದಕ್ಕೆ ಬದ್ಧ ಕಂಕಣನಾದ ಈ ದಾಸನು ನಿನ್ನ ಸಹಾಯಕ್ಕೆ ಬಂದಿರುವನು ;