ಪುಟ:ಜಗನ್ಮೋಹಿನಿ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ wyvyr ಇy , •••••••• •••••••• + ಜಗನ್ನೊಹಿನೀ ನೀನಿನ್ನು ಅಂಜಬೇಕಾದುದಿಲ್ಲ ಎನ್ನಲು ಆಕೆಯು ಎದ್ದು ನಿಂತಳು. ಈಕೆಯ) ನಡು ಪ್ರಾಯದವಳಾಗಿಯೂ ರೂ ಪವತಿಯಾ ಗಿಯ ಕೃಶಾಂಗಿಯಾಗಿ ಇದ್ದಳು, ದಿವ್ಯತರವಾದ ಪೀತಾಂ ಬರವನ್ನು ಟ್ಟು ಸಕಲಾಭರಣಗಳನ್ನು ಇಟ್ಟು ಕೊಂಡಿದ್ದಳು. ಆಕೆ ಯ ಕೇಶಪಾಶವು ಕೆದರಿಹೋಗಿದ್ದಿತು. ಅವರ ಎಳೆದಾಟದಲ್ಲಿ ಆಕೆಯ ಜಡೆಮುಡಿಯು ಬಿಚ್ಚಿ ಹೋಗಿದ್ದು ದೋ ಏನೋ. ವೀರನು ಆ ನಾರಿಯನ್ನು ಕರುಣಾಮಯವಾದ ಕಡೆಗಣ್ಣಿ ನಿಂದನೋಡಿ (' ಮಾನಿನಿಯೆ! ನೀನಾರು?ಈ ವೇಳೆಯಲ್ಲಿ ಇಲ್ಲಿಗೆಬಂದು ದಕ್ಕೆ ಕಾರಣ ವೇನು? ನಿನ್ನನ್ನು ಎಳೆದಾಡುತ್ತಿದ್ದ ಆ ಜನರಾರು??? ಎಂದು ಕೇಳಿದನು. - ಹೆಂಗಸು:-ಸ್ಯಾವಿಾ, ನಾನು ಕುಶಸ್ಥಳದ ಪ್ರಸಿದ್ದ ರಾದ ಸೋಮಯಾಜಿಗಳ ಧರ್ಮಪತ್ನಿ, ನಾವು ದಂಪತಿಗಳು ಸೇವಾರ್ಥಿಗಳಾಗಿ ಕಾಲುನಡೆ ಯಿಂದ ಪರಶುರಾಮ ಕ್ಷೇತ್ರಕ್ಕೆ ಪಯಣವಾಡುತ್ತಿರುವೆವು, ಅತಿವೃದ್ದ ನಾದ ನನ್ನ ಪತಿಯುಇಂದು ಬಿಸಿಲಿನ ಬೇಗೆಯನ್ನು ಸೈರಿಸಿಕೊಂಡು ಈ ಕಾಡುದಾರಿಯಲ್ಲಿ ನಡೆಯ ಲಾರದೆ ಬಹಳ ಬಳಲಿದನು, ಅದರ ಮೇಲೆ, ಅಲಸಿಕೆಯಿಂದಲೋ ಏನೋ, ಸಂಜೆಯ ಮುಂದೆ ವಿಪರೀತವಾಗಿ ಜ್ವರ ಹೊಡಿಯಿತು. ಆದುದರಿಂದ ಈ ಇರುಳು ಆ ಸರೋವರದ ದಂಡೆಯಲ್ಲಿಯೇ ಎಲ್ಲಿಯಾದರೂ ತಂಗಿ ದಣಿವಾರಿಸಿಕೊಂಡು ನಾಳೆ ಹೊತ್ತಾರೆ ತಂಪು ಹೊತ್ತಿನಲ್ಲಿ ಮುಂದಕ್ಕೆ ಹೊರಡಬೇಕೆಂದು ನಿಶ್ಚಯಿಸಿ ಕೊಂಡು ಆ ತೋಟದ ಕಾವಲುಗಾರನ ಗುಡಿಸಿಲಿನಲ್ಲಿ ಇಳದು ಕೊಂಡಿರುವೆವು. ನಾನೀಗತಾನೆ ಆ ಸರೋವರಕ್ಕೆ ನೀರಿಗೆ ಸಲ ವಾಗಿ ಬಂದೆನು, ಅಲ್ಲಿಂದಿಲ್ಲಿಗೆ ಯಾರೋ ಘೋರರೂಪಿಗ ಳಾದ ಇಬ್ಬರು ನನ್ನನ್ನು ಎತ್ತಿಕೊಂಡು ಒಂದು ಬಾಧಿಸುತ್ತಿದ್ದ ರು.