ಪುಟ:ಜಗನ್ಮೋಹಿನಿ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••••••MY +++ *rvvvvvvvvy

  • )

M. ದೈವಸಹಾಯ. ೨೫ ಅಷ್ಟರಲ್ಲಿಯೇ ನನ್ನ ಸುಕೃತದ ಬಳ್ಮೆಯಿಂದ ದಲಿಸದಿಗೆ ಕೃಷ್ಣನಂತೆ ನೀನು ದೃಷ್ಟಿಗೋಚರನಾಗಿ ನನ್ನ ಕಷ್ಟವನ್ನು ಪರಿ ಹರಿಸಿದೆ. ನೀನೇ ನನ್ನ ದೇವರು- ” ಎನ್ನುತ್ತಿರುವಷ್ಟ ರಲ್ಲಿ ಯೇ - ವೀರ:-ತಾಳು ತಾಳು ! ತಾಯೇ ! ನೀನು ಬ್ರೌಪದಿಗೆ ಸಮಾನಳಾಗಿದ್ದರೂ ಇರಬಹುದು; ಪಾರ್ವತಿಗೆ ಸಮಾನಳಾಗಿ ದ್ದರೂ ಇರಬಹುದು ; ಏತಕೆಂದರೆ ಸತೀಜನರ ಮೈಮೆ ಯು ಬಣಿಸಲಸದಳವಾದುದು, ಆದರೆ, ಸಾಧುಗಳ ಪಾದಸೇವಕನಾದ ನಾನು ಆ ಕೃಷ್ಣನಿಗೆ ಸಮಾನನಾಗುವೆನೆ ? ಮಾನವರನ್ನು ದೇವರಿಗೆ ಹೋಲಿಸುವ ಸ್ತುತಿವಚನಕ್ಕಿಂತಲೂ ಹೇಯವಾದುದಾವುದೂ ಇಲ್ಲ, ಅದಕ್ಕೆ ವಿವೇಕಿಗಳೆಂದಿಗೂ ಕಿವಿಗೊಡರು. ಅದು ಹಾಗಿರಲಿ, ಸದ್ಯ ನನ್ನಿಂದ ನಿನಗೇನಾ ದರೂ ಆಗಬೇಕಾದುದಿದ್ದರೆ ಬೇಗನೆ ಹೇಳು. ಹೆಂಗಸು:-ಸ್ಯಾಮಿ | ಕರುಣಿಸಿ, ನನ್ನನ್ನು ನನ್ನ ಪತಿ ಯಿರುವ ಎಡೆಗೆ ಒಡಗೊಂಡು ಹೋಗಿ ಬಿಡಬೇಕು. ಅದಕ್ಕೆ ವೀರನು 'ಹಾಗಾದರೆ ನನ್ನ ಹಿಂದೆ ಬಾ' ಎಂದು ಮುಂದರಿದು ಹೊರಟನು ; ಆ ಹೆಂಗಸು ಅವನ ಹಿಂದೆಯೇ ಹೊರಟಳು, ವೀರನ ಜತೆಗಾರರಿಬ್ಬರೂ ಮೈಗಾವಲಾಗಿ ಅವಳ ಹಿಂದೆ ನಡೆದರು. ಈ ರೀತಿಯಾಗಿ ಅವರು ಒಂದು ನಿಮಿಷದಲ್ಲಿ ಆ ಸರೋವರದ ಕಡೆಗೆ ಬಂದು ಸೇರಿದರು. ಆಗ ವೀರನು, ಅಲ್ಲಿ ನಿಂತು ಅ ಹೆಂಗಸನ್ನು ಕುರಿತು (ನೀವು ಇಳೆದಿರುವ ಗುಡಿಸಲು ಇಲ್ಲೆಲ್ಲಿದೆ ?” ಎಂದು ಕೇಳಿದನು. ಹೆಂಗಸು:-'ಇದೋ ನೋಡು ಆ ಮರದಡಿ ಹೊಗೆಯ