ಪುಟ:ಜಗನ್ಮೋಹಿನಿ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬

  • * * * * * * * * * * * * * * * * - * * * * * * * *

་ ་ ་ ་ ་ ಜಗನ್ನಿಹಿನೀ, ಡುತ್ತಿರುವುದೇ ನನ್ನ ಗುಡಿಸಲು' ಎಂದು ಕೈಯೆತ್ತಿ ತೋರಿಸಿದಳು. ವೀರ: ಹಾಗಾದರೆ ನೀನಿನ್ನು ನಿಮ್ಮ ವಸತಿಗೆ ಹೋಗಿ ನಿನ್ನ ಪತಿಯನ್ನು ಪರಾಮರಿಸಬಹುದು. ಹೆಂಗಸು:-ನೀವೆಲ್ಲಿಗೆ ಹೋಗುವಿರಿ ? ವೀರ:-ನಾವು ನಮ್ಮ ಕೆಲಸಕ್ಕೆ ಹೋಗುತ್ತೇವೆ. ಹೆಂಗಸು:-ಅಯ್ಯೋ! ನೀವೀಗ ನನ್ನನ್ನು ಬಿಟ್ಟು ಹೋದರೆ ನಡುನೀರಿನಲ್ಲಿ ಕೈಬಿಟ್ಟ ಹಾಗಾಗುತ್ತದೆ. ನೀವಿಲ್ಲದಮೇಲೆ ಈ ರಾತ್ರಿ ಆ ನೀಚರು ನನ್ನ ನ್ನು ಚಿತ್ರವಧೆ ಮಾಡದೇ ಬಿಡರು, ಜ್ವರ ತಪ್ತನಾಗಿ ಮೈಯ್ಯಮೇಲೆ ಪ್ರಜ್ಞೆಯಿಲ್ಲದೇ ಬಿಟ್ಟಿರುವ ವೃದ್ದ ನಾದ ನನ್ನ ಪತಿಯು ಆ ರಕ್ಕಸರ ಸಂಗ ಹೋರಾಡಲಾಪನೆ ? ಆಪನ್ನಳಾದ ಅಬಲೆಗೆ ಅಭಯ ವನ್ನು ಕೊಟ್ಟ ಮೇಲೆ ನೆಟ್ಟಗೆ ನಿಲ್ಲು ವವರೆಗೂ ಕಾಪಾಡದೇ ನಿರ್ಜನವಾದ ನಟ್ಟಡವಿಯಲ್ಲಿ ಬಿಟ್ಟು ಹೋಗುವುದು ಸಜ್ಜನರಿಗೆ ಧರ್ಮವೆ ? ನೀವು ಹೊರಟುಹೋದರೆ ನಾನು ಈ ಸರಸ್ಸಿನಲ್ಲಿ ಬಿದ್ದು ಪ್ರಾಣವನ್ನು ಕಳೆದುಕೊಳ್ಳುತ್ತೇನೆ ಮಾನಕ್ಕಿಂತಲೂ ಪ್ರಾಣವು ಹೆಚ್ಚಾದುದಲ್ಲ. ಅಯ್ಯೋ ಆಗ ನನ್ನ ಪತಿಯ ಗತಿಯು ಏನಾಗುವುದೋ? ವೀರ:-ಕೊಂಚ ಯೋಚಿಸಿ, 'ಒಳ್ಳೆಯದು, ನಾವು ಈ ರಾತ್ರಿಯನ್ನು ಕಳೆಯುವುದಕ್ಕೆ ಅಲ್ಲಿ ಎಲ್ಲಿಯಾದರೂ ಅನು ಕೂಲವಾದ ಸ್ಥಳವಿದೆಯೇ ? ಹೆಂಗಸು:-ನಮ್ಮ ಗುಡಿಸಲಿನ ಪಕ್ಕ ದಲ್ಲಿ ಯೇ ತೋಟದ ಕಾವಲುಗಾರನ ಮುಂಚಿಗೆಯೊಂದಿದೆ. ಅದು ಬಹಳ ಅನುಕೂಲ ವಾಗಿದೆ, ಅದರಲ್ಲಿ ನೀವು ಇರುವುದಕ್ಕೆ ಏನೂ ಆಕ್ಷೇಪಣೆಯಿಲ್ಲ. ವೀರ:-ಆ ಕಾವಲುಗಾರನು ಅದರಲ್ಲಿ ಇಲ್ಲ ವೋ ? m