ಪುಟ:ಜಗನ್ಮೋಹಿನಿ .djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• v hy in hh ළු ಜಗಹಿನೀ ಕೊಂಡಿದ್ದನು. ವೀರನು ಇವನನ್ನು ನೋಡಿ ಎಲ್ಲಾ ಮಾಜೀ ! ನೀನಾರು ?9' ಎಂದು ಕೇಳಿದನು. ಆ ಹುಡುಗ:-ಮಾಡುತ್ತಿದ್ದ ಕೆಲಸವನ್ನು ಬಿಟ್ಟು ನಿಂತು, “ನಾನು ಕಾವಲುಗಾರ.' ವೀರ: ಇಲ್ಲಿ ಕಳ್ಳರ ಕೋಟಲೆಯುಂಟೋ ? - ಹುಡುಗ:-ಆ ಕೋಟಲೆ ಇಲ್ಲ ದಮೇಲೆ ಕಾವಲೇತಕ್ಕೆ ? ಎರ:-ಭಲಾ! ಚನ್ನಾಗಿ ಹೇಳಿದೆ. ಒಳ್ಳೆಯದು, ರಾತ್ರಿ ವೇಳೆ ಈ ಗುಡಿಸಲುಗಳಲ್ಲಿ ದೀಪಹಚ್ಚುವ ಕಟ್ಟಲೆ ಇಲ್ಲವೋ ? ಹುಡುಗ: ಕಾವಲುಗಾರನು ದೀಪ ಹಚ್ಚಿ ಕೊಂಡು, ಪದ ಹೇಳಿಕೊಂಡಿದ್ದರೆ ಕಳ್ಳರನ್ನು ಚನ್ನಾಗಿ ಕಂಡು ಹಿಡಿಯಬಹುದು. ಬೇಟೆಗಾರನು ಬಲೆಯೊಡ್ಡಿ ದೀವಟಿಗೆ ಹಿಡಿದುಕೊಂಡಿದ್ದರೆ ಮೃಗ ಗಳು ತಾವಾಗಿಯೆ ಸದ್ದಿಲ್ಲದೇ ಬಂದು ಬಿದ್ದು ಬಿಡುತ್ತವೆ ಅಲ್ಲವೆ? ನೀರನು ಅವನಮಾತಿಗೆ ಬೆರಗಾಗಿ 'ಇಲ್ಲ ವೈಯಾ, ಇಲ್ಲ ಎಂದು ಮೊದಲನೆಯ ಸವಾರನ ಮೊಗವನ್ನು ನೋಡಿದನು. ಅವನು ಈಹುಡುಗನಿಗೆ ಕಳ್ಳರನ್ನು ಹಿಡಿಯುವ ಯುಕುತಿಯು ವಂಶ ಪರಂಪರೆಯಾಗಿ ಬಂದಿರುವಹಾಗೆ ಕಾಣುತ್ತದೆ. ಇವನು ದೊಡ್ಡ ವನಾದರೆ ಕಳ್ಳರನ್ನು ಹಿಡಿಯುವುದರಲ್ಲಿ ಬಹಳ ಪ್ರವೀಣನಾಗು ತಾನೆ' ಎಂದನು. ಅದಕ್ಕೆ ವೀರನು ನಕ್ಕು 'ಎಲಾ ಹುಡುಗಾ ಈ ರಾತ್ರಿ ನಮಗೆ ಇರುವುದಕ್ಕೆ ನಿನ್ನ ಗುಡಿಸಲಿನಲ್ಲಿ ಸ್ಥಳ ಕೊಡು ವಿಯಾ ? ' ಎಂದು ಕೇಳಿದನು. ಹುಡುಗ--ಸದ್ದು ಮಾಡದೇ, ಎದ್ದು ಓಡಾಡದೇ, ಬಿದ್ದಿರು ವುದಾದರೆ ನಿಮ್ಮ ಮಾತಿಗೆ ಪ್ರತಿ ಹೇಳುವುದಿಲ್ಲ.