ಪುಟ:ಜಗನ್ಮೋಹಿನಿ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ. ୭୮ ••••• ವೀರ.- ಒಳ್ಳೆಯದು, ನಿದ್ದೆ ಬಂದಮೇಲೆ ನಾವು ಸದ್ದು ಮಾಡುವುದೂ ಇಲ್ಲ; ಎದ್ದು ಓಡಾಡುವುದೂ ಇಲ್ಲ; ಎಂದು ಅಲ್ಲಿ ಯೇ ಮೇಯುತ್ತಿದ್ದ ಕುದುರೆಗಳನ್ನು ನೋಡಿ ಹುಡುಗ ನನ್ನು ಕುರಿತು “ಎಲೈ! ನಮ್ಮ ಕುದುರೆಗಳಿಗೆ ಈ ಇರುಳು ಹುಲ್ಲಿಗೂ ಸ್ಥಳಕ್ಕೂ ಏರ್ಪಾಡು ಮಾಡುವಿಯಾ? ನಿನಗೆ ನಾನು ಒಳ್ಳೆಯ ಪಾರಿತೋಷಕವನ್ನು ಕೊಡಿಸುತ್ತೇನೆ” ಎಂದನು, ಹುಡುಗ.-'ಒಳ್ಳೆಯದಾಗಲಿ, ಬುದ್ಧಿ! ಅದಕ್ಕೆ ಹೇಗೆ? ಎನ್ನ ಬೇಕೆ?ಇಲ್ಲೆನು, ಹುಲ್ಲಿಗೆ ಕಡಮೆಯೆ? ಸ್ಥಳಕ್ಕೆ ಕಡವೆಯೇ ಈ ಪಕ್ಕದಲ್ಲಿರುವ ಹುಲ್ಲು ಗಾವಲಿನಲ್ಲಿ ಒಂದೊಂದು ಗೊಂತು ಕಟ್ಟಿದರೆ ನಿಮ್ಮ ಕುದುರೆಗಳು ಹೊಟ್ಟೆ ದುಂಬಾ ಮೇ ದು ಸಾತಾಗಿ ಮಲಗಿಕೊಳ್ಳುತ್ತವೆ ಎಂದು ಆ ಕುದುರೆಗಳ ಕಡೆಗೆ ಹೊರಟನು. ಆಗ ಆ ವೀರಮುಖ್ಯರು ತಮ್ಮ ತಮ್ಮ ಕುದುರೆಗಳನ್ನು ಹಿಡಿದುಕೊಂಡು ತಡಿಯನ್ನೂ ಕಡಿವಾಣವನ್ನೂ ಕಳಚಿ ಕೆಳಗಿರಿಸಿ ಮೈಯೊರಸಿ, ಬೆನ್ನು ತಟ್ಟಿ ತೊರಳಿಗೆ ಸುತ್ತಿದ್ದ ಹಗ್ಗ ದೊರಸ ಅವನ ಕೈಗೆ ಕೊಟ್ಟರು. - ಆವೇಳೆಗೆ, ಆ ಹೆಂಗಸು ತನ್ನ ಗುಡಿಸಲಿನ ಮುಂದುಗಡೆ ಬಂದು ನಿಂತಳು. ಈಗ ತಟ್ಟನೆ ಆಕೆಯನ್ನು ಗುರುತು ಹಿಡಿಯು ವುದಕ್ಕಾಗಲಿಲ್ಲ ; ಏಕೆಂದರೆ, ಆಕೆಯು ತನ್ನ ಉಡಿಗೆ ತೊಡಿಗೆ ಗಳನ್ನು ಮಾರ್ಪಡಿಸಿಕೊಂಡಿದ್ದಳು, ಗಂಗಾವಿ ಶೀರೆಯನ್ನು ಟ್ಟಿ ದಳು; ಕುತ್ರನಿ ಕುಪ್ಪಸವನ್ನು ತೊಟ್ಟಿದ್ದಳು. ವೀರನು ಆಕೆಯನ್ನು ನೋಡಿ •ಅಮ್ಮಾ ನಿನ್ನ ಪತಿಯ ದೇಹಸ್ಥಿತಿಯು ಹೇಗಿದೆ;” ಎನ್ನಲು ಆಕೆಯು ಜ್ವರಬಿಟ್ಟಿದೆ; ಚನ್ನಾಗಿ ನಿದ್ದೆ ಮಾಡುತಿದಾನೆ' ಎಂದು ಸ್ವಲ್ಪ ಮುಂದಕ್ಕೆ