ಪುಟ:ಜಗನ್ಮೋಹಿನಿ .djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೊಹಿನೀ, ಅಲ್ಲಿ ಮೂವರೂ ತಮ್ಮ ತಮ್ಮ ನಿಲುವಂಗಿಗಳನ್ನು ಹಾಸಿಕೊಂಡು ದೇವರನಾಮಗಳನ್ನು ಉಚ್ಚಾರಮಾಡುತಾ ಮಲಗಿ ಕೊಂಡರು. ಆಗ ವೀರನು ಈ ಸಮಯದಲ್ಲಿ ಮಹಾಕವಿಗಳಲ್ಲಿ ಯಾ ರಾದರೂ ಒಬ್ಬರು ಇಲ್ಲಿದ್ದರೆ ಈ ಗುಡಿಸಲನ್ನು ಹೇಗೆ ಬಣ್ಣಿಸು ತಿದ್ದರೋ? ಒಳ್ಳೆಯದು, ಸದ್ಯಕ್ಕೆ ಮಹಾವೀರರ ಕವಿತಾ ಚಾತು ರ್ಯವನ್ನು ನೋಡುವ, ನೀವು ಇದನ್ನು ಸಂಕ್ಷೇಪವಾಗಿ ವರ್ಣಿ ಸಿರಿ.'ಎಂದನು. ಮೊದಲನೆಯ ಸವಾರ.-ಈ ಕುಟೀರವು ಕಪಟಿಯ ಹೃದ ಯದಂತೆ ತಮೋಮಯವಾಗಿರುವುದು. ವೀರ-ಭಾಪುರೆ ! ನಿನಗೆ ಆಶುಕವಿಯೆಂಬ ಬಿರುದು ತಕ್ಕುದು. ಆದರೆ ಈ ತೃಣ ಕುಟಿಗೆ ಕಪಟಿಗಳ ಹೃದಯದ ಸಾದೃಶ್ಯವನ್ನು ಹೇಳುವುದು ಏನೋ ನನಗೆ ಅಧರ್ಮವಾಗಿ ಕಾಣುತ್ತದೆ; ಏತಕೆಂದರೆ, ಕಪಟಿಗಳ ಹೃದಯದಲ್ಲಿ ಸಿಲುಕಿದ ಬಡಪಾಣಿಗೆ ಬಿಡುಗಡೆ 0ತಾಗುವುದು ಕಷ್ಟ. ಆವೇಳೆಗೆ, ಕಾವಲಿನ ಹುಡುಗನು ಗುಡಿಸಲ ಬಾಗಿಲ ಬಳಿಯ ಬಂದುನಿಂತು “ಬುದ್ಧಿ! ಕುದುರೆಗಳಿಗೆ ನೀರು ಕುಡಿಸಿ, ಗಾಳಿಗೂ ಮಳೆಗೂ ಮರೆಯಾದ ಸ್ಥಳದಲ್ಲಿ ಭದ್ರವಾಗಿ ಕಟ್ಟಿ, ಯಥೇಷ್ಟವಾಗಿ ಹುಲ್ಲು ತಂದುಹಾಕಿರುವೆನು, ಅಪ್ಪಣೆಯಾದರೆ ನಾನು ಆ ಯಮ್ಮಣ್ಣಿಯವರ ಗುಡಸಲಿಗೆ ಹೋಗಿ ಮಲಗಿ ಕೊಳ್ಳುತ್ತೇನೆ, ಸಾವಿಾ! ಬುದ್ದಿ! ನೆನಪಿರಲಿ; ನಾನು ನಿದ್ದೆ ಮಾಡುತ್ತಿರುವಾಗ ನೀವೆಲ್ಲಿಯಾದರೂ ನನಗೆ ಇನಾಮು ಕೊಡ ದೇ ಮೋಸಮಾಡಿ ಹೊರಟುಹೋಗಿ ಬಿಟ್ಟಿರಿ,,, ಎಂದು ಕೂಗಿ ಹೇಳಿದನು: