ಪುಟ:ಜಗನ್ಮೋಹಿನಿ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ , » » » * ** * * * * * * * * * * y h/* * *ಳ v/*/ ಜಗನ್ನೊಹಿನಿ. ಕೊಳ್ಳುವುದಕ್ಕೆ ನಿಮಗೆ ಬರುವುದಿಲ್ಲ : ಅಪ್ಪಣೆಯಾದರೆ ನಾನೇ ಅದನ್ನು ಸರಿಮಾಡಿ ಮುಚ್ಚಿ ಕೊಂಡು ಹೋಗುತ್ತೇನೆ. ಇವನ ಮಾತುಗಳನ್ನು ಕೇಳುತ್ತಿದ್ದ ಹಾಗೆಯೇ ಶ್ರಾಂತ ರಾಗಿದ್ದ ಆ ವೀರ ಮುಖ್ಯರು ಮೈ ಮರೆತು ನಿದ್ರೆ ಹೋದರು. ವೀರನು ನಿದ್ದೆಗಣ್ಣಿನಲ್ಲಿ ಯೇ 'ಒಳ್ಳೆಯದು, ಹಾಗೆಯೇ ಮಾಡು' ಎಂದನು. ಕೂಡಲೆ, ಆ ಹುಡುಗನು ಆ ಗುಡಿಸಲ ಬಾಗಿಲನ್ನು ದಡಾ ರಂದು ಮುಚ್ಚಿ ದನು, “ಹಿಂದೆಯೇ (ಖಣೀರ್, ಖಣೀರ್? ಎಂಬ ಕಬ್ಬಿಣದ ಸಂಕಲೆಗಳ ಶಬ್ದ ವೂ ಚಪ್ಪಳೆಯ ಸಪ್ಪಳವೂ ಒಂದರ ಮೇಲೊಂದು ಕೇಳಬಂದುವು. ಅರನಿದ್ದೆಯಲ್ಲಿದ್ದ ಮೊದಲನೆಯ ಸವಾರನು ಈ ಶಬ್ದ ಗಳಿಗೆ ಬೆಚ್ಚು ಬಿದ್ದು ಎಚ್ಚರಗೊಂಡು ತನ್ನೊಳುತಾನು “ಏನಿ ದಾಶ್ಚರ್ಯ ! ಆ ಹುಡುಗನು ಹೇಳಿದುದನ್ನು ಕೇಳಿದರೆ, ಇದರ ಬಾಗಿಲು ಈ ರಾತ್ರಿಗಾಳಿಗೆ ನಮ್ಮ ತಲೆಯ ಮೇಲೆ ಬೀಳುವುದೋ ಎಂದು ಭಯವಾಗಿದ್ದಿ ತು ; ಅಂಥದು, ಕೀಲು ಗೂಟಗಳಮೇಲೆ ತಿರುಗುವ ಕಬ್ಬಿಣದ ಕದದಂತೆ ಸಶಬ್ದ ನಾಗಿ ಮುಚ್ಚಿಕೊಂಡುದು ಹೇಗೆ ? ಆ ಶೃಂಖಳೆಗಳ ಶಬ್ದ ವೆಲ್ಲಿಯದು ? ಹೊರಗಡೆ, ಚಪ್ಪಳಿ ಬಡಿದವರಾರು ? ಎಂದು ಎಂದು ಕೊಂಡು ಇವುಗಳನ್ನು ವಿಮರ್ಶಿ ಸುವುದಕ್ಕೆ ಸಲವಾಗಿ ತಟ್ಟನೆ ಎದ್ದು ಬಾಗಿಲನ್ನು ಹುಡಕಾಡಿ ದನು. ಕೈಗೆ ದೊಡ್ಡ ದೊಡ್ಡ ಕಬ್ಬಿಣದ ಕಂಬಿಗಳು ಸಿಕ್ಕಿ ದುವು. ಆಗ ಅವನ ಸಂಶಯವು ಮತ್ತಷ್ಟು ಹೆಚ್ಚಿತು. ತವಕದಿಂದ ಸುತ್ತ ಮುತ್ತಲೂ ನೋಡ ಹೊರಟನು. ಈ ಸಂಭ್ರಮದಲ್ಲಿ