ಪುಟ:ಜಗನ್ಮೋಹಿನಿ .djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ. ೩೫

  • * * * * * *

• / 2 v/ ಅವನು ಸೀರನ ಕಾಲನ್ನು ಕತ್ತಲಲ್ಲಿ ಕಾಣದೆ ತುಳಿದನು, ವೀ ರನು 'ಯಾರದು' ಎನಲು ಆ ಸವಾರನು 'ನಾನು, ಕ್ಷಮಿಸಬೇಕು? ಎಂದನು. ಅದಕ್ಕೆ ಅವನು “ಎಲೈ ! ನಿನಗೇನು ಚಿತ್ರಭ್ರಮ ಣೆಯೋ ? ನಿದ್ರಾಭ್ರಮಣೆಯೋ ? ಅದೇಕೆ ಹೀಗೆ ಕತ್ತಲಲ್ಲಿ ಎದ್ದು ಸುತ್ತುತಿರುವೆ ?” ಎಂದು ಕೇಳಿದನು. ಅದಕ್ಕೆ ಸವಾ ರನು “ಸ್ವಾಮಿ | ಜಾಗ್ರತೆಯಾಗಿ ಎದ್ದು ಈ ಗುಡಿಸಲನ್ನು ಪರೀಕ್ಷಿ ಸಿನೋಡಿದರೆ ಯಾವುದೊಂದೂ ಗೊತ್ತಾಗುತ್ತದೆ. ಏಳಿ, ಎದ್ದು ನೋಡಿ ! ತಡಮಾಡಬೇಡಿ ! ಎಂದನು. ಅವನ ಮಾತುಗಳನ್ನು ವೀರನೂ ಅವನ ಮತ್ತೊಬ್ಬ ಜತೆಗಾರನೂ ಕೇಳಿ ಅಚ್ಚರಿಗೊಂಡು ಮೇಲಕ್ಕೆ ಏಳು ವಷ್ಟರೊಳ ಗಾಗಿ, ಮೃಗಗಳನ್ನು ಅಟ್ಟಿಕೊಂಡು ಬರುವ ಬೇಟೆಗಾರರ ಕಲ ಕಲವೆದ್ದಿತು, ಶಿಳ್ಳುಗಳು ಚ ಸ್ಪಳೆಗಳೂ ಚೀರಾಟವೂ ಕೂಡ ಜವೂ ಆ ಕಾಡಿನಲ್ಲಿ ತಲೆಗೊಂಡುವು. ಅದನ್ನು ಕೇಳಿ ವೀರಮುಖರು ಬೆಕ್ಕಸ ಬೆರಗಾಗಿ ದಿಕ್ಕು ತೋಚದೇ ಕೂಗಿ, ರೇಗಿ ಆ ಗುಡಿಸಲನ್ನು ಮುರಿದು ಹೊರಹೊರ ಡುವುದಕ್ಕೆ ಎಷ್ಟೊ ಸಾಹಸಪಟ್ಟರು. ಆದರೂ ಅವರ ಸಾಹಸವು ಸಾರ್ಥಕವಾಗಲಿಲ್ಲ, ಸುತ್ತಮುತ್ತಲೂ ಮುರಿಯುವುದಕ್ಕೂ ಬಗ್ಗಿ. ಸುವುದಕ್ಕೂ ಅಸಾಧ್ಯವಾದ ಕಣಕಾಲು ಗಾತ್ರದ ಕಬ್ಬಿಣದ ಕಂಬಿ ಗಳ ಹೊರತು ಮತ್ಯಾವುದೂ ಅವರ ಕೈಗೆ ಸಿಗಲಿಲ್ಲ. ಹೊರಗಡೆ, ಕಾಡಾನೆಗಳು ಮುತ್ತಿಕೊಂಡು ಮೇಲಿನ ಛಾವಣಿಯನ್ನು ಕಿಕಿತ್ಸೆ ಈಡಾಡುತ್ತವೆಯೋ ಎಂಬಂತ ಆ ಗುಡಿಸಲು ಗದಗದನೆ ನಡುಗಿತು; ಮೇಗಣಿಂದ ತರಗುಗಳು ಸರಗರಿಯುತ್ತ ಸುತ್ತಲೂ ಉದುರಿದುವು; ಕಾಡಗಿಚ್ಚು ಬಂದು