ಪುಟ:ಜಗನ್ಮೋಹಿನಿ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪ್ರಕರಣ, ಭೈರವಾನಂದ, ಪಾಪಪುಣ್ಯಗಳಿಗೆ ಸಾಕ್ಷಿಯಾದ ಪ್ರತ್ಯಕ್ಷ ದೇವತೆಯ ಮಂಡಲವು ಮೂಡಣದೆಶೆಯಲ್ಲಿ ಮೂಡಿತು ; ಇಂದು ಮಂಡ ಲವು ಅಂದಗೆಟ್ಟು ಪಡುವಲ ಕಡೆಗೆ ಓಡಿತು ಲೋಕದಲ್ಲಿ ಬಲವತ್ತರನಾದವನಿಂದ ಸೋಲಿಸಲ್ಪಟ್ಟವನು ಕಳೆಗೆಟ್ಟು ಓಡಿದುದೇನೂ ಸ್ವಭಾವವಿರುದ್ಧ ವಾದುದಲ್ಲ ; ವನರಾಜಿಯು ಕೋಕಿಲೆಗಳ ಕಾಕಲಿಯಿಂದ ಕೂಡಿತು ; ಎಳಗಾಳಿಯು ಅರೆಬಿರಿದಸರಸಿಜದ ಪರಿಮಳದಿಂದ ತೀಡಿತು ; ಮರಗಿಡ ಬಳ್ಳಿಗಳ ಮೇಲೆ ಬಿದ್ದಿದ್ದ ಇಬ್ಬನಿಯು ಅರುಣಕಿರುಣ ಸಂಪ ರ್ಕದಿಂದ ಮಳೆಬಿಲ್ಲಿನ ಬಣ್ಣಗಳನ್ನು ಹೊಂದಿ ಕಣೋ ಳಿಸಿತು. ಈ ಸಮಯದಲ್ಲಿ ಪದಾತಿಗಳಂತೆ ಕಾಣುತ್ತಿದ್ದ ಮೂವರು ವಿಂಧ ಪರ್ವತದ ವಾಯವ ದಿಗ್ಯಾಗದ ಮಹಾರಣ್ಯದಲ್ಲಿದ್ದ ಒಂದು ಮಹಾಕಾಳಿಯ ದೇವಸ್ಥಾನದ ಹತ್ತಿರಕ್ಕೆ ಅತಿರಭಸದಿಂದ ಬಂದರು. ಈ ದೇವಾಲಯವು ಬಹು ಪುರಾತನವಾದುದು, ಇದರ ಪ್ರಾಕಾರ, ಮಹಾದ್ವಾರ ಮೊದಲಾದ ಆವರಣಗಳು ಬಿದ್ದು ಹಾ ಳಾಗಿ ಹೋಗಿದ್ದಾಗ್ಯೂ ಅದರ ಗೋಡೆಗಳ ಮೇಲೂ ಕಂಬಗಳ ಮೇಲೂ ಗೋಪುರಗಳ ಮೇಲೂ ಅದನ್ನು ಕಟ್ಟಿದ ಶಿಲ್ಪಕಾರನ ಕಲಾಕೌಶಲ್ಯವು ಸುವ್ಯಕ್ತವಾಗಿದ್ದಿತು. ಇದರ ಮುಂದುಗಡೆ, ಸುಮಾರು ಒಂದುಬಾರು ಅಗಲ